ನವದೆಹಲಿ: ಟೆಲಿಮೆಡಿಸಿನ್‌ಗೆ ಮಾಡಿದ ವೆಚ್ಚವನ್ನು ವಿಮೆ ಪರಿಹಾರ ವಿತರಿಸುವಾಗ ಪರಿಗಣಿಸಬೇಕು ಎಂದು ಆರೋಗ್ಯ ಮತ್ತು ಸಾಮಾನ್ಯ ವಿಮೆ ಕಂಪನಿಗಳಿಗೆ ನಿರ್ದೇಶನ ನೀಡಲಾಗಿದೆ.
ನೋಂದಾಯಿತ ವೈದ್ಯರು ಟೆಲಿಮೆಡಿಸಿನ್ ನೀಡಲು ಭಾರತೀಯ ವೈದ್ಯಕೀಯ ಮಂಡಳಿಯು (ಎಂಸಿಐ) ಮಾರ್ಚ್‌ನಲ್ಲಿ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಿತ್ತು. ಚಿಕತ್ಸೆ ಪಡೆಯಲು ಟೆಲಿಮೆಡಿಸಿನ್‌ಗೆ ಮಾಡಿದ ವೆಚ್ಚವನ್ನು ವಿಮೆ ಪರಿಹಾರ ನೀಡುವಾಗ ಲೆಕ್ಕಕ್ಕೆ ತೆಗೆದುಕೊಳ್ಳಬೇಕು ಎಂದು ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ಸುತ್ತೋಲೆಯಲ್ಲಿ ತಿಳಿಸಿದೆ.
ಟೆಲಿಮೆಡಿಸಿನ್ ಬಳಕೆಯಿಂದಸಾಂಕ್ರಾಮಿಕ ರೋಗ ಹರಡದಂತೆ ನಿಯಂತ್ರಿಸಲು ಸಾಧ್ಯವಾಗುವುದು.ಆರೋಗ್ಯ ಕಾರ್ಯಕರ್ತರು ಮತ್ತು ಕಾಯಿಲೆ ಪೀಡಿತರಿಗೂ ಇದು ಸುರಕ್ಷತೆ ಒದಗಿಸುತ್ತದೆ. ಭೌಗೋಲಿಕ ಅಂತರ ಮತ್ತು ಸೀಮಿತ ಸಂಪನ್ಮೂಲಗಳ ಕಾರಣಕ್ಕೆ ರೋಗಿಗಳಿಗೆ ವ್ಯಕ್ತಿಗತವಾಗಿ ಆರೋಗ್ಯ ಸೇವೆ ಒದಗಿಸುವುದು ಸವಾಲಿನಿಂದ ಕೂಡಿದೆ. ಟೆಲಿಮೆಡಿಸಿನ್‌ನಿಂದಗ್ರಾಮೀಣ ಪ್ರದೇಶದ ಕಾಯಿಲೆ ಪೀಡಿತರು ವೈದ್ಯರ ಸಲಹೆ ಮತ್ತು ಚಿಕಿತ್ಸೆ ಪಡೆಯಲು ದೂರ ಪ್ರಯಾಣ ಮಾಡಬೇಕಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.