ನವದೆಹಲಿ: ಕಳೆದ ವರ್ಷ ಏಪ್ರಿಲ್ 1 ರಿಂದ 2021 ರ ಮಾರ್ಚ್ 8 ರವರೆಗೆ 2.02 ಕೋಟಿಗಿಂತ ಹೆಚ್ಚು ತೆರಿಗೆದಾರರಿಗೆ ₹ 2,00,411 ಕೋಟಿಗಿಂತಲೂ ಹೆಚ್ಚಿನ ಮೊತ್ತವನ್ನು ಮರುಪಾವತಿ ಮಾಡಿರುವುದಾಗಿ ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ಇದನ್ನೂ ಓದಿ:ಐ.ಟಿ: ಮರುಪಾವತಿ ಮಾಹಿತಿ ಸುಲಭ
ಈ ಕುರಿತು ಬುಧವಾರ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ಆದಾಯ ತೆರಿಗೆ ಇಲಾಖೆ, 'ಒಟ್ಟು ₹ 2,00,411 ಕೋಟಿ ಮೊತ್ತದ ಮರುಪಾವತಿಯಲ್ಲಿ 1.99 ಕೋಟಿ ತೆರಿಗೆದಾರರಿಗೆ ₹71,865 ಕೋಟಿ ಹಿಂದಿರುಗಿಸಲಾಗಿದೆ. ₹1.28 ಲಕ್ಷ ಕೋಟಿಯನ್ನು ಕಾರ್ಪೊರೇಟ್ ತೆರಿಗೆದಾರರಿಗೆ ಮರುಪಾವತಿ ಮಾಡಲಾಗಿದೆ,' ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.