ನವದೆಹಲಿ: ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ಪ್ರವೇಶಿಸಲು ತೆರಿಗೆ ಪಾವತಿದಾರರಿಗೆ ಸಮಸ್ಯೆ ಎದುರಾಗಿರುವುದನ್ನು ಗಮನಿಸಿರುವುದಾಗಿ ಇಲಾಖೆಯು ಹೇಳಿದೆ. ಸಮಸ್ಯೆ ಸರಿಪಡಿಸಲು ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಆದಾಯ ತೆರಿಗೆ ಇಲಾಖೆ, ‘ಐಟಿಡಿ ಇ-ಫೈಲಿಂಗ್ ಪೋರ್ಟಲ್ಅನ್ನು ಪ್ರವೇಶಿಸುವಲ್ಲಿ ತೆರಿಗೆದಾರರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಪೋರ್ಟಲ್ ಪ್ರವೇಶಕ್ಕೆ ಅನಿಯಮಿತ ದಟ್ಟಣೆ ಇರುವುದಾಗಿ ಇನ್ಫೋಸಿಸ್ ಮಾಹಿತಿ ನೀಡಿದೆ. ಸಮಸ್ಯೆಯನ್ನು ಸಂಸ್ಥೆ ಗಮನಿಸಿದೆ. ಇದಕ್ಕಾಗಿ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಕೆಲವು ಬಳಕೆದಾರರಿಗೆ ಅನಾನುಕೂಲವಾಗಬಹುದು. ಇದಕ್ಕಾಗಿ ವಿಷಾದಿಸುತ್ತೇವೆ’ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
ಇನ್ಫೊಸಿಸ್ ಅಭಿವೃದ್ಧಿಪಡಿಸಿರುವ ತೆರಿಗೆ ಇ-ಫೈಲಿಂಗ್ ಪೋರ್ಟಲ್ ಅನ್ನು ಜೂನ್ 7, 2021 ರಂದು ಲೋಕಾರ್ಪಣೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.