ADVERTISEMENT

ನೇರ ತೆರಿಗೆ ಸಂಗ್ರಹ ಹೆಚ್ಚಳ

ಪಿಟಿಐ
Published 12 ನವೆಂಬರ್ 2024, 0:46 IST
Last Updated 12 ನವೆಂಬರ್ 2024, 0:46 IST
   

ನವದೆಹಲಿ: 2024–25ರ ಹಣಕಾಸು ವರ್ಷದ ಏಪ್ರಿಲ್‌ನಿಂದ ನವೆಂಬರ್ 10ರ ವರೆಗೆ ₹12.11 ಲಕ್ಷ ಕೋಟಿ ನೇರ ತೆರಿಗೆ ಸಂಗ್ರಹವಾಗಿದೆ.

ಕಳೆದ ವರ್ಷದ ಇದೇ ಅವಧಿಯಲ್ಲಿ ₹10.49 ಲಕ್ಷ ಕೋಟಿ ಇತ್ತು. ಇದಕ್ಕೆ ಹೋಲಿಸಿದರೆ ಶೇ 15ರಷ್ಟು ಏರಿಕೆ ಯಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ. ಕಾರ್ಪೊರೇಟ್‌ ತೆರಿಗೆ ಸಂಗ್ರಹ ₹5.10 ಲಕ್ಷ ಕೋಟಿ ಆಗಿದೆ. ಕಾರ್ಪೊರೇಟ್ ಅಲ್ಲದ ತೆರಿಗೆಗಳು ₹6.62 ಲಕ್ಷ ಕೋಟಿಯಾಗಿದೆ. ₹35,923 ಕೋಟಿ ಇತರೆ ತೆರಿಗೆ ಸಂಗ್ರಹವಾಗಿದೆ. ಒಟ್ಟಾರೆ ₹2.92 ಲಕ್ಷ ಕೋಟಿ ತೆರಿಗೆ ಮರು‍ಪಾವತಿ ಮಾಡಲಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಮರುಪಾವತಿ ಯಲ್ಲಿ ಶೇ 53ರಷ್ಟು ಹೆಚ್ಚಳವಾಗಿದೆ.

2024–25ನೇ ಆರ್ಥಿಕ ಸಾಲಿನ ಬಜೆಟ್‌ ನಲ್ಲಿ ₹22.12 ಲಕ್ಷ ಕೋಟಿ ನೇರ ತೆರಿಗೆ ಸಂಗ್ರಹದ ಗುರಿ ಹೊಂದ ಲಾಗಿದೆ(ವೈಯಕ್ತಿಕ ಆದಾಯ ತೆರಿಗೆ, ಕಾರ್ಪೊರೇಟ್‌ ಮತ್ತು ಇತರೆ ತೆರಿಗೆ). ಕಳೆದ ವರ್ಷಕ್ಕಿಂತ ಶೇ 13ರಷ್ಟು ಹೆಚ್ಚು ಗುರಿ ನಿಗದಿಪಡಿಸಲಾಗಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.