ADVERTISEMENT

ಮಾರ್ಗದರ್ಶಿ ಚಿಟ್‌ ಫಂಡ್ವ ಹಿವಾಟು ಹೆಚ್ಚಳ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 28 ಜೂನ್ 2018, 18:26 IST
Last Updated 28 ಜೂನ್ 2018, 18:26 IST

ಬೆಂಗಳೂರು: ‘ಮಾರ್ಗದರ್ಶಿ ಚಿಟ್‌ ಫಂಡ್‌ ಸಂಸ್ಥೆಯು 2017–18ನೇ ಹಣಕಾಸು ವರ್ಷದಲ್ಲಿ ₹ 10,204 ಕೋಟಿ ವಹಿವಾಟು ನಡೆಸಿದ್ದು, 2025 ವೇಳೆಗೆ ವಹಿವಾಟು ಮೊತ್ತವನ್ನು ₹ 20 ಸಾವಿರ ಕೋಟಿಗೆ ಹೆಚ್ಚಿಸಲಾಗುವುದು’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಶೈಲಜಾ ಕಿರಣ್‌ ತಿಳಿಸಿದರು.

‘1994–1995 ರಲ್ಲಿ ಸಂಸ್ಥೆಯ ವಹಿವಾಟು ಮೊತ್ತ ₹ 382 ಕೋಟಿ ಇತ್ತು. ಅದು 2017–18ರಲ್ಲಿ 26 ಪಟ್ಟು ಹೆಚ್ಚಾಗಿದೆ. ಈ ಯಶಸ್ಸು ಸ್ಥಾಪಕರಾದ ರಾಮೋಜಿ ರಾವ್‌ ಅವರಿಗೆ ಸಲ್ಲಬೇಕು. ವೃತ್ತಿಪರತೆ, ಗುಣಮಟ್ಟದ ಸೇವೆ ಮತ್ತು ವಿತ್ತೀಯ ಶಿಸ್ತಿನಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೇ ಇರುವ ಮನೋಭಾವದಿಂದ ಈ ಪ್ರಗತಿ ಸಾಧ್ಯವಾಗಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಪ್ರತಿಯೊಂದು ಶಾಖೆಯಲ್ಲೂ ಗ್ರಾಹಕ ಸೇವೆಗೆ ಆದ್ಯತೆ ನೀಡಲಾಗುತ್ತಿದೆ. ಒಟ್ಟು 105 ಶಾಖೆಗಳಲ್ಲಿ 4,300ಕ್ಕೂ ಅಧಿಕ ಸಿಬ್ಬಂದಿಗಳಿದ್ದು, ಪ್ರತಿ ಬಾರಿಯೂ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವಲ್ಲಿ ಬದ್ಧರಾಗಿದ್ದಾರೆ. ಈ ಎಲ್ಲಾ ಅಂಶಗಳೂ ಸಂಸ್ಥೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ’ಎಂದರು.

ADVERTISEMENT

ರಾಜ್ಯದಲ್ಲಿ ಶೀಘ್ರವೇ 3 ಶಾಖೆ: ‘ನಮ್ಮ ವಹಿವಾಟು ವೃದ್ಧಿಯಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ಪಾತ್ರವೂ ಬಹಳ ಮುಖ್ಯವಾಗಿದೆ. ಕರ್ನಾಟಕದಲ್ಲಿ 2017–18ರಲ್ಲಿ ₹ 1,650 ಕೋಟಿ ವಹಿವಾಟು ನಡೆದಿದೆ.ಸದ್ಯ 20 ಶಾಖೆಗಳಿದ್ದು, ಈ ಹಣಕಾಸು ವರ್ಷದಲ್ಲಿ ಇನ್ನೂ ಎರಡರಿಂದ ಮೂರು ಶಾಖೆಗಳನ್ನು ತೆರೆಯಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.