ADVERTISEMENT

‘ಗಣಿ ಉದ್ಯಮದಲ್ಲಿ ಭಾರತಕ್ಕೆ ಪ್ರಮುಖ ಸ್ಥಾನ’

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 16:23 IST
Last Updated 26 ಜುಲೈ 2021, 16:23 IST
ಪಿ.ಕೆ. ಸತ್ಪತಿ
ಪಿ.ಕೆ. ಸತ್ಪತಿ   

ಬೆಂಗಳೂರು: ಆಸ್ಟ್ರೇಲಿಯಾ, ಚೀನಾ, ಭಾರತ ಮತ್ತು ಬ್ರೆಜಿಲ್ ದೇಶಗಳು ವಿಶ್ವದ ಗಣಿ ಉದ್ಯಮದಲ್ಲಿ ಮುಂಚೂಣಿ ಸ್ಥಾನ ಹೊಂದಿವೆ ಎಂದು ಎನ್‌ಎಂಡಿಸಿ ಲಿಮಿಟೆಡ್‌ನ ಉತ್ಪಾದನಾ ವಿಭಾಗದ ನಿರ್ದೇಶಕ ಪಿ.ಕೆ. ಸತ್ಪತಿ ಹೇಳಿದ್ದಾರೆ.

ಮಧ್ಯಪ್ರದೇಶದ ಸತನಾದಲ್ಲಿನ ಎಕೆಎಸ್‌ ವಿಶ್ವವಿದ್ಯಾಲಯದ ಗಣಿ ಎಂಜಿನಿಯರಿಂಗ್ ವಿಭಾಗ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಕರ್ನಾಟಕ, ಒಡಿಶಾ, ಛತ್ತೀಸಗಡ ಮತ್ತು ಜಾರ್ಖಂಡ್ ರಾಜ್ಯಗಳು ಭಾರತದಲ್ಲಿ ಗಣಿ ಉದ್ಯಮದಲ್ಲಿ ಪ್ರಮುಖ ಸ್ಥಾನ ಹೊಂದಿವೆ’ ಎಂದು ಹೇಳಿದ್ದಾಗಿ ಎನ್‌ಎಂಡಿಸಿ ಪ್ರಕಟಣೆ ತಿಳಿಸಿದೆ. ‘ಖನಿಜಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಯ ಜವಾಬ್ದಾರಿ ಕೂಡ ಗಣಿ ಉದ್ಯಮದ ಮೇಲಿದೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT