ADVERTISEMENT

ಹುವಾವೆ ಕಂಪನಿಯಿಂದ ತೆರಿಗೆ ವಂಚನೆ: ಕೇಂದ್ರ ಸರ್ಕಾರದ ಮೂಲಗಳ ಹೇಳಿಕೆ

ರಾಯಿಟರ್ಸ್
Published 3 ಮಾರ್ಚ್ 2022, 16:12 IST
Last Updated 3 ಮಾರ್ಚ್ 2022, 16:12 IST
ಹುವಾವೆ
ಹುವಾವೆ    

ನವದೆಹಲಿ: ಚೀನಾ ಮೂಲದ ಹುವಾವೆ ಟೆಕ್ನಾಲಜೀಸ್ ಕಂಪನಿಯು ತನ್ನ ವಹಿವಾಟಿನ ದಾಖಲೆಗಳ ತಿದ್ದಿ, ತೆರಿಗೆಗೆ ಒಳಪಡುವ ಆದಾಯವನ್ನು ಕಡಿಮೆ ತೋರಿಸಿದೆ ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ಕೇಂದ್ರ ಹಣಕಾಸು ಸಚಿವಾಲಯವು ಗುರುವಾರ, ‘ದೂರಸಂಪರ್ಕ ವಲಯದ ಪ್ರಮುಖ ಕಂಪನಿಯೊಂದು ₹ 400 ಕೋಟಿ ಆದಾಯವನ್ನು ತೋರಿಸಿಲ್ಲ. ಹಾಗೂ ₹ 480 ಕೋಟಿ ವೆಚ್ಚವೊಂದನ್ನು ತೋರಿಸಿದೆ. ಆದರೆ ಈ ವೆಚ್ಚವನ್ನು ಸಮರ್ಥಿಸಿಕೊಳ್ಳಲು ಕಂಪನಿ ವಿಫಲವಾಗಿದೆ’ ಎಂದು ಹೇಳಿದೆ. ಸಚಿವಾಲಯವು ಕಂಪನಿಯ ಹೆಸರು ಉಲ್ಲೇಖಿಸಿಲ್ಲ.

ಈ ಕುರಿತು ಹುವಾವೆ ವಕ್ತಾರರು ಪ್ರತಿಕ್ರಿಯೆ ನೀಡಿಲ್ಲ. ತೆರಿಗೆ ಅಧಿಕಾರಿಗಳು ಹುವಾವೆ ಕಂಪನಿಯ ನವದೆಹಲಿ, ಗುರುಗ್ರಾಮ, ಬೆಂಗಳೂರು ಕಚೇರಿಗಳ ಮೇಲೆ ಈಚೆಗೆ ಶೋಧ ನಡೆಸಿದ್ದರು. ಅಲ್ಲದೆ, ಕಂಪನಿಯ ಕೆಲವು ಹಿರಿಯ ಅಧಿಕಾರಿಗಳ ನಿವಾಸಗಳ ಮೇಲೆಯೂ ತೆರಿಗೆ ಅಧಿಕಾರಿಗಳ ದಾಳಿ ನಡೆದಿತ್ತು. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಕೇಂದ್ರ ಹೇಳಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.