ADVERTISEMENT

ನೇರ ವಿಮಾನ ಸಂಚಾರ ಪುನರಾರಂಭ: ಚೀನಾ ನಿಯೋಗದ ಜತೆ ಚರ್ಚೆ

ಪಿಟಿಐ
Published 12 ಸೆಪ್ಟೆಂಬರ್ 2024, 13:32 IST
Last Updated 12 ಸೆಪ್ಟೆಂಬರ್ 2024, 13:32 IST
ಕೆ. ರಾಮ್‌ಮೋಹನ್‌ ನಾಯ್ಡು –ಪಿಟಿಐ ಚಿತ್ರ
ಕೆ. ರಾಮ್‌ಮೋಹನ್‌ ನಾಯ್ಡು –ಪಿಟಿಐ ಚಿತ್ರ   

ನವದೆಹಲಿ: ಉಭಯ ದೇಶಗಳ ನಡುವಿನ ನಾಗರಿಕ ವಿಮಾನಯಾನ ವಲಯದ ಬಲವರ್ಧನೆ ಹಾಗೂ ನೇರ ವಿಮಾನ ಸಂಚಾರದ ಪುನರಾರಂಭಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ಗುರುವಾರ ಮಾತುಕತೆ ನಡೆಸಿವೆ. 

ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮ್‌‌ಮೋಹನ್‌ ನಾಯ್ಡು, ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ವುಮ್ಲುನ್ಮಾಂಗ್ ವುಲ್ನಮ್ ಹಾಗೂ ಹಿರಿಯ ಅಧಿಕಾರಿಗಳು ಮತ್ತು ಚೀನಾದ ಪ್ರತಿನಿಧಿಗಳು ಈ ಕುರಿತ ಮಾತುಕತೆಯಲ್ಲಿ ಪಾಲ್ಗೊಂಡಿದ್ದರು. 

‘ಎರಡು ದೇಶಗಳ ನಡುವೆ ನೇರ ವಿಮಾನ ಸಂಚಾರ ಪುನರಾರಂಭಕ್ಕೆ ಸಂಬಂಧಿಸಿದಂತೆ ಸೋಂಗ್‌ ಝಿಯಾಂಗ್ ನೇತೃತ್ವದ ಚೀನಾ  ನಿಯೋಗದ ಜೊತೆಗೆ ಚರ್ಚಿಸಲಾಗಿದೆ. ವಿದೇಶಾಂಗ ಸಚಿವರು ಮತ್ತು ಮಧ್ಯಸ್ಥಗಾರರೊಂದಿಗೆ ಚರ್ಚಿಸಿದ ಬಳಿಕ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಸಚಿವ ರಾಮ್‌ಮೋಹನ್‌ ನಾಯ್ಡು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.