ನವದೆಹಲಿ: ‘ಆಹಾರ ಪದಾರ್ಥಗಳಲ್ಲಿ ಎಷ್ಟು ಪ್ರಮಾಣದಲ್ಲಿ ಕೀಟನಾಶಕ ಅಂಶ ಇರಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಭಾರತವು ಕಠಿಣ ನಿಯಮಾವಳಿಗಳನ್ನು ರೂಪಿಸಿದ್ದು, ಅದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದೆ’ ಎಂದು ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಸ್ಪಷ್ಟಪಡಿಸಿದೆ.
ಆಹಾರದ ಬೆಳೆ ಬೆಳೆಯುವ ವೇಳೆ ಕೀಟನಾಶಕ ಸಿಂಪಡಿಸಲಾಗುತ್ತದೆ. ಈ ವೇಳೆ ಪದಾರ್ಥಗಳಲ್ಲಿ ಕೀಟನಾಶಕ ಅಂಶ ಬೆರೆತು ಹೋಗುತ್ತದೆ.
‘ಮಸಾಲೆ ಪದಾರ್ಥಗಳಲ್ಲಿ ಇರಬೇಕಾದ ಕೀಟನಾಶಕ ಅವಶೇಷಗಳ ಪ್ರಮಾಣದ ಮಿತಿಯನ್ನು ಅಂತರರಾಷ್ಟ್ರೀಯ ಮಾನದಂಡಕ್ಕಿಂತಲೂ 10 ಪಟ್ಟು ಹೆಚ್ಚಿಸಿದೆ ಎಂಬ ಕೆಲವು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿವೆ. ಇವು ಸತ್ಯಕ್ಕೆ ದೂರವಾಗಿವೆ’ ಎಂದು ಪ್ರಾಧಿಕಾರ ಹೇಳಿದೆ.
ಕೀಟನಾಶಕ ಅಂಶಕ್ಕೆ ನಿಗದಿಪಡಿಸಿರುವ ಮಿತಿಯನ್ನು ಎಂದಿಗೂ ಮೀರಿಲ್ಲ. ಅಂತರರಾಷ್ಟ್ರೀಯ ಮಾನದಂಡವನ್ನು ಪಾಲಿಸಲಾಗುತ್ತಿದೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.