ADVERTISEMENT

ಜಿಡಿಪಿ ಪ್ರಗತಿ ಶೇ 6.7: ನೂಮುರಾ

ಪಿಟಿಐ
Published 28 ಅಕ್ಟೋಬರ್ 2024, 15:48 IST
Last Updated 28 ಅಕ್ಟೋಬರ್ 2024, 15:48 IST
ಜಿಡಿಪಿ
ಜಿಡಿಪಿ   

ಮುಂಬೈ: ಭಾರತದ ಜಿಡಿಪಿ ಬೆಳವಣಿಗೆ ಮಂದಗೊಂಡಿದೆ ಹಾಗೂ ಆರ್‌ಬಿಐನ ಪ್ರಸಕ್ತ ಹಣಕಾಸು ವರ್ಷದ ಶೇ 7.2ರಷ್ಟು ಜಿಡಿಪಿ ಅಂದಾಜು ಅತಿಯಾದ ಆಶಾವಾದವಾಗಿದೆ ಎಂದು ಜಪಾನ್‌ನ ಬ್ರೋಕಿಂಗ್ ಕಂಪನಿ ನೂಮುರಾ ಹೇಳಿದೆ.

2024–25ರ ಹಣಕಾಸು ವರ್ಷದಲ್ಲಿ ಶೇ 6.7 ಮತ್ತು 2025–26ರಲ್ಲಿ ಶೇ 6.8ರಷ್ಟು ಜಿಡಿಪಿ ಬೆಳವಣಿಗೆ ಆಗಲಿದೆ ಎಂದು ನೂಮುರಾ ಅಂದಾಜಿಸಿದೆ. ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಇಳಿಕೆ, ನಗರ ಪ್ರದೇಶದಲ್ಲಿ ಎಫ್‌ಎಂಸಿಜಿ ಕಂಪನಿಗಳ ವಹಿವಾಟು ಕಡಿಮೆ ಆಗಿದೆ ಎಂದು ಹೇಳಿದೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿಯು ಶೇ 7.2ರಷ್ಟು ಪ್ರಗತಿ ಕಾಣಲಿದೆ ಎಂದು ಆರ್‌ಬಿಐ ಅಂದಾಜಿಸಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.