ನವದೆಹಲಿ: ಸ್ಥಳೀಯ ಕರೆನ್ಸಿಗಳಲ್ಲಿ ವಹಿವಾಟುಗಳನ್ನು ಅನುಮತಿಸಲು ಉಭಯ ದೇಶಗಳ ವೇಗದ ಪಾವತಿ ವ್ಯವಸ್ಥೆಗಳನ್ನು ಲಿಂಕ್ ಮಾಡಲು ಭಾರತವು ಇಂಡೋನೇಷ್ಯಾದೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಭಾರತೀಯ ಉನ್ನತ ಅಧಿಕಾರಿಯೊಬ್ಬರು ಹಣಕಾಸು ಸಚಿವರು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್‌ಗಳ (ಎಫ್‌ಎಂಸಿಬಿಜಿ) ಜಿ 20 ಸಭೆಯ ಸಂದರ್ಭದಲ್ಲಿ ತಿಳಿಸಿದ್ದಾರೆ.
ಈ ಬೆಳವಣಿಗೆಯನ್ನು ಇಂಡೋನೇಷ್ಯಾದ ಹಣಕಾಸು ಸಚಿವರಾದ ಮುಲ್ಯಾನಿ ಇಂದ್ರಾವತಿ ಅವರು ಪ್ರತ್ಯೇಕವಾಗಿ ದೃಢಪಡಿಸಿದ್ದಾರೆ.
ಈ ವ್ಯವಸ್ಥೆ ಜಾರಿಗ ಬಂದರೆ, ಸಿಂಗಪುರ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ನಂತರ ಇಂಡೋನೇಷ್ಯಾವು ಭಾರತದ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ)ನೊಂದಿಗೆ ತನ್ನ ಪಾವತಿ ವ್ಯವಸ್ಥೆಯನ್ನು ಲಿಂಕ್ ಮಾಡಿದ ಮೂರನೇ ದೇಶವಾಗಲಿದೆ.
‘ಯುಎಇ ರೀತಿಯೇ ಸ್ಥಳೀಯ ಕರೆನ್ಸಿಗಳಲ್ಲಿ ನೈಜ ಸಮಯದ ವಹಿವಾಟು ನಡೆಸಲು ಇಂಡೋನೇಷ್ಯಾದೊಂದಿಗೆ ಮಾತುಕತೆಗಳು ನಡೆಯುತ್ತಿವೆ. ಶೀಘ್ರದಲ್ಲೇ ಇದನ್ನು ಪೂರ್ಣಗೊಳಿಸಲಾಗುವುದು’ಎಂದು ಭಾರತೀಯ ಅಧಿಕಾರಿ ಹೇಳಿದ್ದಾರೆ.
ಆಸಿಯಾನ್ ವಲಯದಲ್ಲಿ ಇಂಡೋನೇಷ್ಯಾ ಭಾರತದ ಎರಡನೇ ಅತಿ ದೊಡ್ಡ ವ್ಯಾಪಾರ ಪಾಲುದಾರ ದೇಶವಾಗಿದ್ದು, ಕಳೆದ ಹಣಕಾಸು ವರ್ಷದಲ್ಲಿ (2022-23) 38.9 ಶತಕೋಟಿ ಮೌಲ್ಯದ ವ್ಯಾಪಾರ ವಹಿವಾಟು ನಡೆದಿದೆ. ವರ್ಷದಿಂದ ವರ್ಷಕ್ಕೆ ಶೇಕಡ 48ರಷ್ಟು ವಹಿವಾಟು ಏರಿಕೆಯಾಗಿದೆ. ಈ ಎರಡೂ ಆರ್ಥಿಕ ಶಕ್ತಿಗಳ ನಡುವಿನ ವ್ಯಾಪಾರವು 2005-06ರಿಂದ ಒಂಬತ್ತು ಪಟ್ಟು ಹೆಚ್ಚಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.