ADVERTISEMENT

ಭಾರತದ ಕಂಪನಿಗಳ ವಿದೇಶಿ ಸಾಲ ಹೆಚ್ಚಳ

ಪಿಟಿಐ
Published 5 ಅಕ್ಟೋಬರ್ 2022, 12:59 IST
Last Updated 5 ಅಕ್ಟೋಬರ್ 2022, 12:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಭಾರತದ ಕಂಪನಿಗಳು ಆಗಸ್ಟ್‌ನಲ್ಲಿ ವಿದೇಶದಿಂದ ಪಡೆದಿರುವ ವಾಣಿಜ್ಯ ಸಾಲದ (ಇಸಿಬಿ) ಮೊತ್ತವು ಹಿಂದಿನ ವರ್ಷದ ಆಗಸ್ಟ್‌ಗೆ ಹೋಲಿಸಿದರೆ ಶೇ 4.6ರಷ್ಟು ಹೆಚ್ಚಾಗಿದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಮಾಹಿತಿಯ ಪ್ರಕಾರ, 2021ರ ಆಗಸ್ಟ್‌ನಲ್ಲಿ ಕಂಪನಿಗಳು ₹23,227 ಕೋಟಿ ಮೊತ್ತದ ಸಾಲ ಪಡೆದಿದ್ದವು. 2022ರ ಆಗಸ್ಟ್‌ನಲ್ಲಿ ₹24,287 ಕೋಟಿಗೆ ಏರಿಕೆ ಆಗಿದೆ.

ಒಟ್ಟು ಮೊತ್ತದಲ್ಲಿ ₹20,137 ಕೋಟಿ ಸಾಲವನ್ನು ಆಟೊಮೆಟಿಕ್‌ ರೂಟ್‌ ಮೂಲಕ ಪಡೆಯಲಾಗಿದೆ. ಉಳಿದ ಮೊತ್ತವನ್ನು ಮಸಾಲಾ ಬಾಂಡ್‌ಗಳನ್ನು ನೀಡುವ ಮೂಲಕ ಸಂಗ್ರಹಿಸಲಾಗಿದೆ ಎಂದು ಅದು ಮಾಹಿತಿ ನೀಡಿದೆ.

ADVERTISEMENT

ಎಚ್‌ಡಿಎಫ್‌ಸಿ ಬ್ಯಾಂಕ್‌, ಫುಲ್ಲರ್‌ಟನ್‌ ಇಂಡಿಯಾ ಕ್ರೆಡಿಟ್‌ ಕೊ ಲಿಮಿಟೆಡ್‌, ಟೊಯೋಟ ಫೈನಾನ್ಶಿಯಲ್‌ ಸರ್ವೀಸ್‌, ಐಐಎಫ್ಎಲ್‌ ಫೈನಾನ್ಸ್‌, ಟಾಟಾ ಸಿಯಾ ಏರ್‌ಲೈನಸ್‌, ಹುಂಡೈ ಟ್ರಾನ್ಸಿಸ್‌ ಇಂಡಿಯಾ ಕಂಪನಿಗಳು ಬಾಹ್ಯ ವಾಣಿಜ್ಯ ಸಾಲದ ಮೂಲಕ ಬಂಡವಾಳ ಸಂಗ್ರಹಿಸಿಕೊಂಡಿವೆ ಎಂದು ಆರ್‌ಬಿಐ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.