ಬೆಂಗಳೂರು: ಮಾರುತಿ ಸುಜುಕಿಯ ಎರಡು ಮಾದರಿಯ ಕಾರುಗಳಲ್ಲಿ ಫ್ಯೂಯಲ್ ಪಂಪ್ ಸಮಸ್ಯೆ ಕಾಣಿಸಿಕೊಂಡಿದ್ದು, ಇದನ್ನು ಪರಿಹರಿಸಲು 16 ಸಾವಿರ ಕಾರುಗಳ ರಿಕಾಲ್‌ಗೆ ಕಂಪನಿ ನಿರ್ಧರಿಸಿದೆ.
ದೇಶದ ಮುಂಚೂಣಿ ಕಾರು ತಯಾರಿಕಾ ಕಂಪನಿಯಾದ ಮಾರುತಿ ಸುಜುಕಿಯ ಬಲೆನೊ ಮಾದರಿಯ 11,851 ಹಾಗೂ ವ್ಯಾಗನ್‌ಆರ್‌ನ 4,190 ಕಾರುಗಳಲ್ಲಿ ಇಂಧನ ಪಂಪ್ ಮೋಟಾರಿನಲ್ಲಿ ದೋಷ ಕಂಡುಬಂದಿತ್ತು. ಈ ಕಾರುಗಳು 2019ರ ಜುಲೈನಿಂದ ನವೆಂಬರ್ ಅವಧಿಯಲ್ಲಿ ತಯಾರಾಗಿದ್ದಾಗಿವೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಕಂಪನಿ, ‘ನಿರ್ದಿಷ್ಟ ಅವಧಿಯಲ್ಲಿ ತಯಾರಾದ ಬಲೆನೊ ಮತ್ತು ವ್ಯಾಗನ್ ಆರ್ ಕಾರುಗಳಲ್ಲಿನ ಫ್ಯೂಯಲ್ ಪಂಪ್ ಮೋಟಾರುಗಳಲ್ಲಿ ದೋಷ ಇರುವ ಸಾಧ್ಯತೆ ಇದೆ. ಈ ಸಮಸ್ಯೆ ಇದ್ದಲ್ಲಿ ಎಂಜಿನ್ ಬಂದ್ ಆಗುವ ಅಥವಾ ಸ್ಟಾರ್ಟ್ ಆಗುವಲ್ಲಿ ಸಮಸ್ಯೆ ಎದುರಾಗಬಹುದು’ ಎಂದು ಮಾರುತಿ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.