ADVERTISEMENT

2031ಕ್ಕೆ ಭಾರತ 3ನೇ ಅತಿದೊಡ್ಡ ಆರ್ಥಿಕತೆ: ವರದಿ

ಪಿಟಿಐ
Published 19 ಸೆಪ್ಟೆಂಬರ್ 2024, 14:36 IST
Last Updated 19 ಸೆಪ್ಟೆಂಬರ್ 2024, 14:36 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ‘2024–25ನೇ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆಯು ಶೇ 6.7ರಷ್ಟು ಪ್ರಗತಿ ಕಾಣಲಿದೆ. 2030–31ರ ವೇಳೆಗೆ ಭಾರತವು ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ’ ಎಂದು ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ಸಂಸ್ಥೆಯ ವರದಿ ಗುರುವಾರ ಹೇಳಿದೆ.

2023–24ನೇ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ 8.2ರಷ್ಟು ಪ್ರಗತಿ ಕಂಡಿದೆ. ವಾಣಿಜ್ಯ ವಹಿವಾಟುಗಳ ಸುಧಾರಣೆ, ಖಾಸಗಿ ವಲಯದಲ್ಲಿ ಹೂಡಿಕೆ ಹೆಚ್ಚಳ ಮತ್ತು ಸಾರ್ವಜನಿಕ ಬಂಡವಾಳದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಒತ್ತು ನೀಡಬೇಕಿದೆ ಎಂದು ಹೇಳಿದೆ.

ಕರಾವಳಿ ತೀರಗಳ ಅಭಿವೃದ್ಧಿ ಸೇರಿ ಭಾರತವು ಮೂಲಸೌಕರ್ಯದ ಅಭಿವೃದ್ಧಿಗೆ ಒತ್ತು ನೀಡಬೇಕಿದೆ. ಭೌಗೋಳಿಕ ಕಾರ್ಯತಂತ್ರ ಪ್ರದೇಶದ ಮೂಲಕ ಗರಿಷ್ಠ ವ್ಯಾಪಾರದ ಲಾಭವನ್ನು ಪಡೆಯಬೇಕಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ADVERTISEMENT

ದೇಶದ ಶೇ 90ರಷ್ಟು ವ್ಯಾಪಾರವು ಸಾಗರೋತ್ತರ ಪ್ರದೇಶವನ್ನು ಅವಲಂಬಿಸಿದೆ. ಹಾಗಾಗಿ, ರಫ್ತು ಪ್ರಮಾಣ ಹೆಚ್ಚಿಸಲು ಬಂದರುಗಳ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಬೇಕು ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.