ನವದೆಹಲಿ: ನ್ಯಾಷನಲ್ ಕೋ ಆಪರೇಟಿವ್ ಎಕ್ಸ್‌ಪೋರ್ಟ್ಸ್ ಲಿಮಿಟೆಡ್ (NCEL) ಮೂಲಕ ಆಫ್ರಿಕಾದ ನಮೀಬಿಯಾಕ್ಕೆ ಒಂದು ಸಾವಿರ ಟನ್ ಬಾಸುಮತಿಯೇತರ ಬಿಳಿ ಅಕ್ಕಿಯನ್ನು ರಫ್ತು ಮಾಡಲು ಭಾರತ ಅನುಮತಿ ನೀಡಿದೆ.
ದೇಶೀಯ ಪೂರೈಕೆಯನ್ನು ಉತ್ತೇಜಿಸುವ ಸಲುವಾಗಿ 2023ರ ಜುಲೈ 20ರಂದು ಬಾಸುಮತಿಯೇತರ ಬಿಳಿ ಅಕ್ಕಿ ರಫ್ತಿಗೆ ನಿರ್ಬಂಧ ಹೇರಲಾಗಿತ್ತು. ಆದರೆ ಕೆಲವು ದೇಶಗಳಿಗೆ ಅವರ ಆಹಾರ ಭದ್ರತೆಯ ಅಗತ್ಯಕ್ಕೆ ಅನುಸಾರವಾಗಿ ಕೇಂದ್ರ ಸರ್ಕಾರ ಅಕ್ಕಿಯನ್ನು ಪೂರೈಸುತ್ತಿದೆ. ಹೀಗಾಗಿ ನಮೀಬಿಯಾಗೂ ರಫ್ತು ಮಾಡಲು ಅನುಮತಿ ನೀಡಿದೆ.
ಈ ಹಿಂದೆ ಭಾರತದಿಂದ ನೇಪಾಳ, ಕ್ಯಾಮರೂನ್, ಮಲೇಷಿಯಾ, ಫಿಲಿಫಿನ್ಸ್, ಡಿಐವೊರಾ, ಸೀಶೆಲ್ಸ್ ದೇಶಗಳಿಗೆ ಅಕ್ಕಿಯನ್ನು ರಫ್ತು ಮಾಡಲು ಅವಕಾಶ ನೀಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.