ಬೆಂಗಳೂರು: ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಸೇವೆಗಳು ಡಿಜಿಟಲೀಕರಣಗೊಳ್ಳುತ್ತಿದ್ದು, ಅಂಚೆ ಇಲಾಖೆಯ ಸೇವೆಗಳು ಕೂಡ ವಾಟ್ಸ್ಆ್ಯಪ್ ಮೂಲಕ ಲಭ್ಯವಾಗಲಿದೆ.
ಇಂಡಿಯಾ ಪೋಸ್ಟ್ ಮತ್ತು ಪೋಸ್ಟಲ್ ಬ್ಯಾಂಕಿಂಗ್ ಸೇವೆಗಳನ್ನು ಡಿಜಿಟಲ್ ರೂಪದಲ್ಲಿ ವಾಟ್ಸ್‌ಆ್ಯಪ್ ಮೂಲಕ ನೀಡಲು ಸಿದ್ಧತೆ ನಡೆದಿದೆ ಎಂದು ವರದಿಯಾಗಿದೆ.
ಆರಂಭದಲ್ಲಿ, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಸೇವೆಗಳು ವಾಟ್ಸ್ಆ್ಯಪ್ ಮೂಲಕ ದೊರೆಯಲಿದ್ದು, ಹೊಸ ಖಾತೆ ತೆರೆಯುವ ಕೋರಿಕೆ ಮತ್ತು ಖಾತೆಯಲ್ಲಿನ ಮೊತ್ತ ಪರಿಶೀಲನೆ ಬಗ್ಗೆ ಆಯ್ಕೆಗಳು ಇರಲಿವೆ.
ಆರಂಭಿಕ ಹಂತದಲ್ಲಿ ವಾಟ್ಸ್‌ಆ್ಯಪ್ ಮೂಲಕ ನೀಡಲಾಗುವ ವಿವಿಧ ಸೇವೆಗಳನ್ನು ಪರಿಶೀಲಿಸಲಾಗುತ್ತದೆ. ನಂತರದಲ್ಲಿ, ಆಧಾರ್–ಪಾನ್ ಅಪ್‌ಡೇಟ್, ಎಲ್ಲ ವಿಧದ ಪೋಸ್ಟಲ್ ಸೇವೆಗಳನ್ನು ಪರಿಶೀಲಿಸಿ, ಮುಂದಿನ ಹಂತದಲ್ಲಿ ಬಳಕೆದಾರರಿಗೆ ಒದಗಿಸಲು ಸಿದ್ಧತೆ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.