ನವದೆಹಲಿ: ಗೃಹ ಸಾಲ ನೀಡುವ ಉದ್ದೇಶದಿಂದ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಮತ್ತು ಎಚ್‌ಡಿಎಫ್‌ಸಿ ಲಿಮಿಟೆಡ್ ಒಪ್ಪಂದ ಮಾಡಿಕೊಂಡಿವೆ.
ಎಚ್‌ಡಿಎಫ್‌ಸಿ ಲಿಮಿಟೆಡ್‌ನ ಗೃಹಸಾಲ ಉತ್ಪನ್ನಗಳು ಮತ್ತು ಅದರ ಪರಿಣತಿಯನ್ನುಐಪಿಪಿಬಿ ದೇಶದಾದ್ಯಂತ ಇರುವ ತನ್ನ ಗ್ರಾಹಕರಿಗೆ ನೀಡುವ ಗುರಿಯನ್ನು ಹೊಂದಿದೆ ಎಂದು ಎಚ್‌ಡಿಎಫ್‌ಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಸಾಲ ನೀಡುವುದಕ್ಕೆ ಸಂಬಂಧಿಸಿದಂತೆ, ತಾಂತ್ರಿಕ ಮತ್ತು ಕಾನೂನು ಮೌಲ್ಯಮಾಪನಗಳು, ಪ್ರಕ್ರಿಯೆ ಮತ್ತು ವಿತರಣೆ ಕಾರ್ಯಗಳನ್ನು ಎಚ್‌ಡಿಎಫ್‌ಸಿ ಲಿಮಿಟೆಡ್ ನಿರ್ವಹಣೆ ಮಾಡಲಿದೆ.
ಸಾಲ ಸಿಗುವಂತೆ ಮಾಡದ ಹೊರತು ವಿತ್ತೀಯ ಸೇರ್ಪಡೆಯನ್ನು ಸಾಧಿಸಲಾಗುವುದಿಲ್ಲ. ಬಹಳಷ್ಟು ಗ್ರಾಹಕರಿಗೆ ತಮ್ಮ ಪ್ರದೇಶದಲ್ಲಿ ಗೃಹಸಾಲ ಒದಗಿಸುವ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ ಇಲ್ಲ. ಹೀಗಾಗಿ, ಗ್ರಾಹಕರ ಎಲ್ಲ ರೀತಿಯ ಬ್ಯಾಂಕಿಂಗ್ ಅಗತ್ಯಗಳಿಗೆ ಐಪಿಪಿಬಿ ವೇದಿಕೆಯಾಗಲಿದೆ ಎಂದು ಐಪಿಪಿಬಿನ ವ್ಯವಸ್ಥಾಪಕ ನಿರ್ದೇಶಕ ಜೆ. ವೆಂಕಟರಾಮು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.