ADVERTISEMENT

ಇಂಡಿಯನ್‌ ಬ್ಯಾಂಕ್‌ ಲಾಭ ಶೇ 36ರಷ್ಟು ಹೆಚ್ಚಳ

ಪಿಟಿಐ
Published 28 ಅಕ್ಟೋಬರ್ 2024, 13:09 IST
Last Updated 28 ಅಕ್ಟೋಬರ್ 2024, 13:09 IST
ಇಂಡಿಯನ್‌ ಬ್ಯಾಂಕ್‌
ಇಂಡಿಯನ್‌ ಬ್ಯಾಂಕ್‌   

ನವದೆಹಲಿ: ಸರ್ಕಾರಿ ಸ್ವಾಮ್ಯದ ಇಂಡಿಯನ್‌ ಬ್ಯಾಂಕ್‌ 2024–25ರ ಹಣಕಾಸು ವರ್ಷದ ಸೆಪ್ಟೆಂಬರ್‌ ತ್ರೈಮಾಸಿಕದ ಲಾಭದಲ್ಲಿ ಶೇ 36ರಷ್ಟು ಏರಿಕೆಯಾಗಿದ್ದು, ₹2,707 ಕೋಟಿ ಲಾಭ ಗಳಿಸಿದೆ.

2023–24ರ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ ₹1,988 ಕೋಟಿ ಲಾಭ ಗಳಿಸಿತ್ತು ಎಂದು ಬ್ಯಾಂಕ್‌ ಷೇರುಪೇಟೆಗೆ ಸೋಮವಾರ ತಿಳಿಸಿದೆ.

ಒಟ್ಟು ವರಮಾನವು ₹17,770 ಕೋಟಿ ಇದ್ದರೆ, ಕಳೆದ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹15,736 ಕೋಟಿ ವರಮಾನ ಗಳಿಸಿತ್ತು. 

ADVERTISEMENT

ನಿವ್ವಳ ಬಡ್ಡಿ ವರಮಾನದಲ್ಲಿ ಶೇ 8ರಷ್ಟು ಏರಿಕೆಯಾಗಿದ್ದು, ₹6,194 ಕೋಟಿ ಆಗಿದೆ. ವಸೂಲಾಗದ ಸಾಲದ ಸರಾಸರಿ ಪ್ರಮಾಣವು ಶೇ 4.97ರಿಂದ ಶೇ 3.48ಕ್ಕೆ ಇಳಿದಿದೆ. ನಿವ್ವಳ ಎನ್‌ಪಿಎ ಶೇ 0.60ರಿಂದ ಶೇ 0.27ಕ್ಕೆ ಕುಸಿದಿದೆ.

ಸಮರ್ಪಕ ಬಂಡವಾಳ ಅನುಪಾತ (ಸಿಎಆರ್‌) ಶೇ 15.53ರಿಂದ ಶೇ 16.55ಕ್ಕೆ ಏರಿಕೆಯಾಗಿದೆ ಎಂದು ಬ್ಯಾಂಕ್‌ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.