ನವದೆಹಲಿ: ಸರ್ಕಾರಿ ಸ್ವಾಮ್ಯದ ಇಂಡಿಯನ್ ಬ್ಯಾಂಕ್ 2023–24ರ ಹಣಕಾಸು ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ₹2,247 ಕೋಟಿ ನಿವ್ವಳ ಲಾಭ ಗಳಿಸಿದೆ.
2022–23ರ ಇದೇ ಅವಧಿಯಲ್ಲಿ ₹1,447 ಕೋಟಿ ಲಾಭ ಗಳಿಸಿತ್ತು. ಈ ಲಾಭಕ್ಕೆ ಹೋಲಿಸಿದರೆ ಶೇ 55ರಷ್ಟು ಏರಿಕೆಯಾಗಿದೆ. ವರಮಾನವು ₹14,238 ಕೋಟಿಯಿಂದ ₹16,887 ಕೋಟಿಗೆ ಹೆಚ್ಚಳವಾಗಿದೆ. ನಿವ್ವಳ ಬಡ್ಡಿ ಆದಾಯವು ಶೇ 9ರಷ್ಟು ಏರಿಕೆಯಾಗಿದ್ದು, ₹6,015 ಕೋಟಿ ಗಳಿಸಿದೆ ಎಂದು ಬ್ಯಾಂಕ್ ತಿಳಿಸಿದೆ.
2023–24ರ ಪೂರ್ಣ ಹಣಕಾಸು ವರ್ಷದ ಲಾಭದಲ್ಲಿ ಶೇ 53ರಷ್ಟು ಏರಿಕೆಯಾಗಿದ್ದು, ₹8,063 ಕೋಟಿ ಲಾಭ ಗಳಿಸಿದೆ. ಒಟ್ಟು ಆದಾಯವು ₹52,085 ಕೋಟಿಯಿಂದ ₹63,482 ಕೋಟಿಗೆ ಹೆಚ್ಚಳವಾಗಿದೆ ಎಂದು ತಿಳಿಸಿದೆ.
ಬಿಎಸ್‌ಇಯಲ್ಲಿ ಬ್ಯಾಂಕ್‌ನ ಪ್ರತಿ ಷೇರಿನ ಮೌಲ್ಯ ₹535.75ರಂತೆ ವಹಿವಾಟು ನಡೆಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.