ADVERTISEMENT

ದಶಕದ ಕನಿಷ್ಠ ಮಟ್ಟಕ್ಕೆ ಜಿಎನ್‌ಪಿಎ ಇಳಿಕೆ ಸಂಭವ: ಅಧ್ಯಯನ ವರದಿ

ಪಿಟಿಐ
Published 9 ಮಾರ್ಚ್ 2023, 19:31 IST
Last Updated 9 ಮಾರ್ಚ್ 2023, 19:31 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದೇಶದ ಬ್ಯಾಂಕ್‌ಗಳ ವಸೂಲಾಗದ ಸಾಲದ ಸರಾಸರಿ (ಜಿಎನ್‌ಪಿಎ) ಪ್ರಮಾಣವು 2022–23ನೇ ಹಣಕಾಸು ವರ್ಷದಲ್ಲಿ ದಶಕದ ಕನಿಷ್ಠ ಮಟ್ಟಕ್ಕೆ ಇಳಿಕೆ ಕಾಣುವ ನಿರೀಕ್ಷೆ ಇದೆ ಎಂದು ಅಸೋಚಾಂ–ಕ್ರಿಸಿಲ್‌ ರೇಟಿಂಗ್‌ ಸಂಸ್ಥೆಗಳು ನಡೆಸಿರುವ ಜಂಟಿ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

2022–23ನೇ ಹಣಕಾಸು ವರ್ಷದಲ್ಲಿ ಜಿಎನ್‌ಪಿಎ ಶೇಕಡ 0.90ರಷ್ಟು ಕಡಿಮೆ ಆಗಲಿದ್ದು, ಶೇ 5ಕ್ಕಿಂತಲೂ ಕೆಳಕ್ಕೆ ಇಳಿಯಲಿದೆ. 2023–24ನೇ ಹಣಕಾಸು ವರ್ಷದಲ್ಲಿ ಜಿಎನ್‌ಪಿಎ ಶೇ 4ಕ್ಕಿಂತಲೂ ಕೆಳಕ್ಕೆ ಇಳಿಕೆ ಕಾಣಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕೋವಿಡ್‌ ಸಾಂಕ್ರಾಮಿಕದ ನಂತರ ಆರ್ಥಿಕತೆಯು ಚೇತರಿಕೆ ಕಂಡುಕೊಳ್ಳುತ್ತಿರುವುದು ಹಾಗೂ ಸಾಲ ನೀಡಿಕೆ ಪ್ರಮಾಣ ಹೆಚ್ಚಾಗುತ್ತಿರುವುದರಿಂದಾಗಿ ಜಿಎನ್‌ಪಿಎ ಇಳಿಕೆ ಕಾಣುತ್ತಿದೆ ಎಂದು ಹೇಳಲಾಗಿದೆ. ಕಾರ್ಪೊರೇಟ್‌ ಸಾಲದ ಪ್ರಮಾಣವು ಇಳಿಕೆ ಕಾಣುತ್ತಿದೆ. ಈ ವಿಭಾಗಕ್ಕೆ ಸಂಬಂಧಿಸಿದ ಜಿಎನ್‌ಪಿಎ ಮುಂದಿನ ಹಣಕಾಸು ವರ್ಷದಲ್ಲಿ ಶೇ 2ಕ್ಕಿಂತಲೂ ಕೆಳಕ್ಕೆ ಇಳಿಕೆ ಕಾಣಲಿದೆ. 2018ರ ಮಾರ್ಚ್‌ 31ರಲ್ಲಿ ಜಿಎನ್‌ಪಿಎ ಶೇ 16ರಷ್ಟು ಇತ್ತು.

ADVERTISEMENT

ಕೋವಿಡ್‌ ಅವಧಿಯಲ್ಲಿ ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಪ್ರಮಾಣದ (ಎಂಎಸ್‌ಎಂಇ) ಉದ್ದಿಮೆಗಳು ಹೆಚ್ಚಿನ ಸಂಕಷ್ಟ ಅನುಭವಿಸಿದವು. ಇದರಿಂದಾಗಿ ಆ ವಲಯದ ಜಿಎನ್‌ಪಿಎ 2022ರ ಮಾರ್ಚ್‌ 31ರಲ್ಲಿ ಶೇ 9.3ರಷ್ಟು ಇದ್ದಿದ್ದು 2024ರ ಮಾರ್ಚ್ ವೇಳೆಗೆ ಶೇ 10–11ರ ಆಸುಪಾಸಿಗೆ ಏರಿಕೆ ಆಗಬಹುದು ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.