ADVERTISEMENT

ಮೂರು ವರ್ಷಗಳ ಕನಿಷ್ಠಕ್ಕೆ ಕುಸಿದ Maruti Suzuki ಆದಾಯ: ಷೇರು ಮೌಲ್ಯವೂ ಇಳಿಕೆ

ರಾಯಿಟರ್ಸ್
Published 29 ಅಕ್ಟೋಬರ್ 2024, 10:05 IST
Last Updated 29 ಅಕ್ಟೋಬರ್ 2024, 10:05 IST
<div class="paragraphs"><p>ಮಾರುತಿ ಸುಜುಕಿ</p></div>

ಮಾರುತಿ ಸುಜುಕಿ

   

ಮುಂಬೈ: ಭಾರತದ ಅಗ್ರ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿಯ ತ್ರೈಮಾಸಿಕ ಆದಾಯವು ಮೂರು ವರ್ಷಗಳ ಕನಿಷ್ಠಕ್ಕೆ ಕುಸಿದಿದ್ದು, ಷೇರು ಮಾರುಕಟ್ಟೆಯಲ್ಲೂ ಶೇ 6ರಷ್ಟು ಕುಸಿತ ದಾಖಲಿಸಿದೆ.

ಸಣ್ಣ ಕಾರುಗಳಿಗೆ ತಗ್ಗಿದ ಬೇಡಿಕೆ ಹಾಗೂ ಅಧಿಕ ರಿಯಾಯಿತಿ ದರದ ಮಾರಾಟದಿಂದಾಗಿ ಕಂಪನಿಯ ಆದಾಯ ಕುಸಿದಿದೆ. ಜುಲೈ – ಸೆಪ್ಟೆಂಬರ್ ಅವಧಿಯಲ್ಲಿ ಶೇ 1.4ರ ವೃದ್ಧಿದರದಲ್ಲಿ ₹375 ಶತಕೋಟಿ ವಹಿವಾಟನ್ನು ಕಂಪನಿ ನಿರೀಕ್ಷಿಸಿತ್ತು. ಆದರೆ ಶೇ 0.4ರಷ್ಟು (₹372 ಶತಕೋಟಿ) ವಹಿವಾಟು ದಾಖಲಿಸಿದೆ ಎಂದು ಎಲ್‌ಎಸ್‌ಇಜಿ ದಾಖಲೆ ತಿಳಿಸಿದೆ. ಇದು ಕಳೆದ 11 ತ್ರೈಮಾಸಿಕದಲ್ಲೇ ಕನಿಷ್ಠ ಮಟ್ಟ ಎಂದೆನ್ನಲಾಗಿದೆ.

ADVERTISEMENT

11 ತ್ರೈಮಾಸಿಕದ ದಾಖಲೆಗಳಿಗೆ ಹೋಲಿಸಿದಲ್ಲಿ ಒಟ್ಟು ಶೇ 17ರಷ್ಟು ಕಂಪನಿಯ ಆದಾಯ ಕುಸಿದಿದೆ. ಹೂಡಿಕೆಗಳ ಮೇಲಿನ ದೀರ್ಘಾವಧಿ ಪ್ರಯೋಜನವನ್ನು ಸರ್ಕಾರವು 2023ರ ಏಪ್ರಿಲ್‌ನಲ್ಲಿ ತೆಗೆದುಹಾಕಿತ್ತು. ಇದರ ಪರಿಣಾಮವಾಗಿ ಕಂಪನಿಯು ₹8 ಕೋಟಿಯಷ್ಟು ತೆರಿಗೆ ನಷ್ಟ ಅನುಭವಿಸಿತು. ಆದಾಗ್ಯೂ ವರ್ಷದಿಂದ ವರ್ಷಕ್ಕೆ ಕಂಪನಿಯ ಆದಾಯ ಶೇ 6.3ರ ದರದಲ್ಲಿ ಹೆಚ್ಚಳವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಮಳಿಗೆಗಳಿಗೆ ಉಳಿದ ಹಳೆಯ ಕಾರುಗಳು

ಮಾರುತಿ ಸುಜುಕಿ ಕಂಪನಿಯ ಸಣ್ಣ ಕಾರುಗಳಿಗೆ ಬೇಡಿಕೆ ಕುಸಿದ ಪರಿಣಾಮ ಶೋರೂಂಗಳಲ್ಲಿ ಕಾರುಗಳು ಹಾಗೇ ನಿಂತಿವೆ. ಹೊಸ ಕಾರುಗಳು ಮಾರುಕಟ್ಟೆಗೆ ಬರುತ್ತಿದ್ದರೂ, ಮಾರಾಟವಾಗದ ಹಳೆಯ ಕಾರುಗಳಿಗೆ ಭಾರೀ ರಿಯಾಯಿತಿ ನೀಡಿ ಮಾರಾಟ ಮಾಡಬೇಕಾದ ಸ್ಥಿತಿ ಇದೆ. ಕಳೆದ ಎರಡು ವರ್ಷಗಳಿಂದ ಮಾರಾಟ ಮಳಿಗೆಗಳು ಈ ಸ್ಥಿತಿ ಅನುಭವಿಸಿವೆ ಎಂದು ವರದಿಯಾಗಿದೆ.

ಅಧಿಕ ರಿಯಾಯಿತಿ ಘೋಷಣೆಯಿಂದ ಮಾರಾಟದಿಂದ ಬರಬೇಕಾದ ಲಾಭಾಂಶದ ಮೇಲೂ ಪರಿಣಾಮ ಬೀರಿದೆ. ಕಂಪನಿಯ ಸಣ್ಣ ಕಾರುಗಳ ಮಾರಾಟವು ವರ್ಷದಿಂದ ವರ್ಷಕ್ಕೆ ಶೇ 2ರಷ್ಟು ಕುಸಿತ ದಾಖಲಿಸಿದೆ. ಈ ತ್ರೈಮಾಸಿಕದಲ್ಲಿ ಈ ವಿಭಾಗವು ಶೇ 13ರಷ್ಟು ಕುಸಿತ ಕಂಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.