ADVERTISEMENT

ದಶಕದ ಗರಿಷ್ಠ ಮಟ್ಟ ತಲುಪಿದ ಕಚ್ಚಾ ತೈಲ ಬೆಲೆ

ಪಿಟಿಐ
Published 10 ಜೂನ್ 2022, 11:00 IST
Last Updated 10 ಜೂನ್ 2022, 11:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತಕ್ಕೆ ಪೂರೈಕೆ ಆಗುವ ಕಚ್ಚಾ ತೈಲದ ಬೆಲೆಯು ಒಂದು ದಶಕದ ಗರಿಷ್ಠ ಮಟ್ಟ ತಲುಪಿದೆ. ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 121 ಅಮೆರಿಕನ್ ಡಾಲರ್ ಆಗಿದೆ. ಆದರೆ, ದೇಶಿ ಮಾರುಕಟ್ಟೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಆಗಿಲ್ಲ.

ಕಚ್ಚಾ ತೈಲದ ಬೆಲೆಯು ಗುರುವಾರ ಬ್ಯಾರೆಲ್‌ಗೆ 121.28 ಡಾಲರ್ ಆಗಿದ್ದು, 2012ರ ಫೆಬ್ರುವರಿ, ಮಾರ್ಚ್‌ ತಿಂಗಳಿನಲ್ಲಿಯೂ ಕಚ್ಚಾ ತೈಲದ ಬೆಲೆಯು ಇದೇ ಮಟ್ಟದಲ್ಲಿ ಇತ್ತು ಎಂದು ಕೇಂದ್ರ ಸರ್ಕಾರದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣೆ ಘಟಕದ (ಪಿಪಿಎಸಿ) ಅಂಕಿ–ಅಂಶಗಳು ಹೇಳಿವೆ.

ರಷ್ಯಾ ದೇಶವು ಉಕ್ರೇನ್ ಮೇಲೆ ಆಕ್ರಮಣ ನಡೆಸಿದ ನಂತರದಲ್ಲಿ, ಫೆಬ್ರುವರಿ 25ರಿಂದ ಮಾರ್ಚ್ 29ರವರೆಗಿನ ಅವಧಿಯಲ್ಲಿ ಭಾರತಕ್ಕೆ ಪೂರೈಕೆಯಾಗುವ ಕಚ್ಚಾ ತೈಲದ ಬೆಲೆಯು ಬ್ಯಾರೆಲ್‌ಗೆ ಸರಾಸರಿ 111.86 ಡಾಲರ್ ಆಗಿತ್ತು ಎಂದು ಪಿಪಿಎಸಿ ಹೇಳಿದೆ. ಮಾರ್ಚ್ 30ರಿಂದ ಏಪ್ರಿಲ್ 27ರವರೆಗೆ ಅದರ ಸರಾಸರಿ ಬೆಲೆಯು 103.44 ಡಾಲರ್ ಆಗಿತ್ತು.

ADVERTISEMENT

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳಾದ ಐಒಸಿ, ಬಿಪಿಸಿಎಲ್ ಮತ್ತು ಎಚ್‌ಪಿಸಿಎಲ್ ನಿಯಮದ ಅನ್ವಯ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಪ್ರತಿದಿನವೂ ಪರಿಷ್ಕರಿಸಬೇಕು. ಆದರೆ, ಕಳೆದ ವರ್ಷದ ನವೆಂಬರ್‌ನಿಂದ ಈ ಕಂಪನಿಗಳು ಬೆಲೆಯ ಮೇಲೆ ನಿಯಂತ್ರಣ ಹೇರಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.