ADVERTISEMENT

ಭಾರತದ ಜಿಡಿಪಿ ಬೆಳವಣಿಗೆ ಶೇ 6.3: ವಿಶ್ವಬ್ಯಾಂಕ್‌

ಪಿಟಿಐ
Published 3 ಅಕ್ಟೋಬರ್ 2023, 15:28 IST
Last Updated 3 ಅಕ್ಟೋಬರ್ 2023, 15:28 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ/ವಾಷಿಂಗ್ಟನ್‌: ಭಾರತದ ಆರ್ಥಿಕತೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 6.3ರಷ್ಟು ಬೆಳವಣಿಗೆ ಕಾಣಲಿದೆ ಎಂದು ವಿಶ್ವಬ್ಯಾಂಕ್‌ ಹೇಳಿದೆ. 

ಹೂಡಿಕೆ ಮತ್ತು ದೇಶಿ ಬೇಡಿಕೆಯಿಂದಾಗಿ ಈ ಪ್ರಮಾಣದ ಬೆಳವಣಿಗೆ ಸಾಧ್ಯವಾಗಲಿದೆ ಎಂದು ಮಂಗಳವಾರ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಿದೆ. ಏ‍ಪ್ರಿಲ್‌ನಲ್ಲಿ ಬಿಡುಗಡೆ ಮಾಡಿದ್ದ ವರದಿಯಲ್ಲಿಯೂ ಶೇ 6.3ರಷ್ಟು ಬೆಳವಣಿಗೆ ಕಾಣುವ ಅಂದಾಜನ್ನು ಅದು ಮಾಡಿತ್ತು.

ಆಹಾರ ವಸ್ತುಗಳ ದರವು ಸಹಜ ಸ್ಥಿತಿಗೆ ಮರಳಿದಂತೆ ಮತ್ತು ಸರ್ಕಾರದ ಕ್ರಮಗಳಿಂದಾಗಿ ಅಗತ್ಯ ವಸ್ತುಗಳ ಪೂರೈಕೆ ಸುಧಾರಿಸುತ್ತಿದ್ದಂತೆಯೇ ಹಣದುಬ್ಬರವು ಕ್ರಮೇಣ ಇಳಿಕೆ ಕಾಣಲಿದೆ ಎಂದು ವಿಶ್ವಬ್ಯಾಂಕ್‌ ಹೇಳಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.