ADVERTISEMENT

ಇಂಡಿಯನ್‌ ಆಯಿಲ್‌ ಪ್ರಚಾರ ಅಭಿಯಾನ

​ಪ್ರಜಾವಾಣಿ ವಾರ್ತೆ
Published 3 ಜೂನ್ 2019, 20:00 IST
Last Updated 3 ಜೂನ್ 2019, 20:00 IST

ಬೆಂಗಳೂರು: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆ ಇಂಡಿಯನ್‌ ಆಯಿಲ್‌ (ಐಒಸಿ) ಮಾರಾಟ ಅಭಿಯಾನ ಆರಂಭಿಸಿದೆ.

ಜೂನ್ 1ರಿಂದ ಜುಲೈ 15ರವರೆಗೆ ದೇಶದಾದ್ಯಂತ ಈ ಪ್ರಚಾರ ಆಂದೋಲನ ನಡೆಯಲಿದೆ. ವಿಶ್ವಕಪ್ ಕ್ರಿಕೆಟ್ ಸಂದರ್ಭದಲ್ಲೇ ಈ ಕಾರ್ಯಕ್ರಮ ನಡೆಯುತ್ತಿರುವುದರಿಂದ ಕಾರ್ಯಕ್ರಮದಲ್ಲಿ ಕ್ರಿಕೆಟ್ ಬಳಸಿಕೊಳ್ಳಲಾಗುತ್ತಿದೆ. ₹ 300ಕ್ಕೂ ಹೆಚ್ಚಿನ ಮೊತ್ತದ ಇಂಧನ ಖರೀದಿಸುವ ಬೈಕ್‌ ಹಾಗೂ ₹ 1,000 ಹೆಚ್ಚಿನ ಮೊತ್ತದ ಇಂಧನ ಖರೀದಿಸುವ ನಾಲ್ಕು ಚಕ್ರದ ವಾಹನದ ಪ್ರತಿಯೊಬ್ಬ ಗ್ರಾಹಕರು ಲಾಟರಿ ಬಹುಮಾನ ಗೆಲ್ಲಲು ಅರ್ಹರಾಗುತ್ತಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು, ಗ್ರಾಹಕರು 77105 40400 ಸಂಖ್ಯೆಗೆ <Dealer Code> <Space> <Bill number> <Space> <Bill amount> ನಮೂದಿಸಿ ಎಸ್ಎಂಎಸ್ ಕಳುಹಿಸಬೇಕು.

ಪ್ರತಿಯೊಂದು ಪೆಟ್ರೋಲ್ ಬಂಕ್‌ನಲ್ಲೂ ಮಾರಾಟಗಾರರ (ಡೀಲರ್) ಕೋಡ್ ಲಭ್ಯವಿರುತ್ತದೆ. ಪ್ರತಿ 15 ದಿನಕ್ಕೊಮ್ಮೆ ಲಾಟರಿ ನಡೆಸಲಾಗುವುದು. ಇಂಧನದ ವೋಚರ್, ಕ್ರಿಕೆಟ್ ಬ್ಯಾಟ್ ಮತ್ತು ಸ್ಮಾರ್ಟ್‌ಫೋನ್ ಗೆಲ್ಲಬಹುದಾಗಿದೆ. ಅಖಿಲ ಭಾರತ ಮಟ್ಟದಲ್ಲಿ ಬಂಪರ್ ಬಹುಮಾನ ರೂಪದಲ್ಲಿ 4 ಬೈಕ್ ಮತ್ತು ಒಂದು ಕಾರ್‌ ಗೆಲ್ಲುವ ಅವಕಾಶ ಇದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.