ADVERTISEMENT

ತ್ವರಿತವಾಗಿ ರಿಟೇಲ್‌ ಸಾಲ ನೀಡಿಕೆ: ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌

ಪಿಟಿಐ
Published 14 ಅಕ್ಟೋಬರ್ 2024, 0:03 IST
Last Updated 14 ಅಕ್ಟೋಬರ್ 2024, 0:03 IST
<div class="paragraphs"><p>ಸಾಲ–ಸಾಂದರ್ಭಿಕ ಚಿತ್ರ</p></div>

ಸಾಲ–ಸಾಂದರ್ಭಿಕ ಚಿತ್ರ

   

ಚೆನ್ನೈ: ತ್ವರಿತವಾಗಿ ಸಾಲ ನೀಡಿಕೆ ನಿಟ್ಟಿನಲ್ಲಿ ಸರ್ಕಾರಿ ಸ್ವಾಮ್ಯದ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ (ಐಒಬಿ), ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಚಿಲ್ಲರೆ ಸಾಲ ಪ್ರಕ್ರಿಯೆ ಕೇಂದ್ರಗಳನ್ನು ತೆರೆದಿದೆ.

‘ಚೆನ್ನೈನಲ್ಲಿ ಏಳು ಕೇಂದ್ರಗಳನ್ನು ಉದ್ಘಾಟಿಸಲಾಗಿದೆ. ಉಳಿದಂತೆ ಬೆಂಗಳೂರು, ಕೊಯಮತ್ತೂರು, ದೆಹಲಿ, ಹೈದರಾಬಾದ್‌, ಕೋಲ್ಕತ್ತ, ಲಖನೌ ಮತ್ತು ಮುಂಬೈನಲ್ಲಿ ವರ್ಚುವಲ್‌ ಆಗಿ ಕೇಂದ್ರಗಳಿಗೆ ಚಾಲನೆ ನೀಡಲಾಗಿದೆ’ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅಜಯ್‌ ಕುಮಾರ್‌ ಶ್ರೀವಾಸ್ತವ ತಿಳಿಸಿದ್ದಾರೆ.

ADVERTISEMENT

‘ಗ್ರಾಹಕರ ಅನುಕೂಲಕ್ಕಾಗಿಯಷ್ಟೇ ಈ ಕೇಂದ್ರಗಳನ್ನು ತೆರೆದಿಲ್ಲ. ಬ್ಯಾಂಕಿಂಗ್‌ ಜಾಲಕ್ಕೆ ಮತ್ತಷ್ಟು ಚೇತರಿಕೆ ನೀಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿವೆ. ಡಿಜಿಟಲ್‌ ವ್ಯವಸ್ಥೆಗೆ ಒತ್ತು ನೀಡಲಾಗಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.