ಬೆಂಗಳೂರು: 2020ನೇ ಸಾಲಿನಲ್ಲಿ ಭಾರತೀಯ ರೂಪಾಯಿ ಏಷ್ಯಾ ಖಂಡದಲ್ಲಿ ಕೆಟ್ಟದಾಗಿ ನಿರ್ವಹಣೆ ತೋರಿರುವ ಕರೆನ್ಸಿಗಳ ಸಾಲಿನಲ್ಲಿ ಒಂದೆನಿಸುವ ಮೂಲಕ ಅಪಖ್ಯಾತಿಗೊಳಗಾಗಿದೆ.
ದುರ್ಬಲ ಡಾಲರ್ ಹಾಗೂ ವಿದೇಶಿ ನಿಧಿಯ ಒಳಹರಿವಿನ ಲಾಭವನ್ನು ಪಡೆಯುವಲ್ಲಿ ಭಾರತೀಯ ರೂಪಾಯಿ ವಿಫಲಗೊಂಡಿದೆ.
ಪ್ರಸಕ್ತ ಕ್ಯಾಲೆಂಡರ್ ವರ್ಷದಲ್ಲಿ ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಶೇಕಡಾ 3.28ರಷ್ಟು ಕುಸಿತ ಕಂಡಿದೆ.
ಭಾರತೀಯ ರೂಪಾಯಿಗೆ ಹೋಲಿಸಿದಾಗ ಅತ್ಯಂತ ಕೆಟ್ಟ ನಿರ್ವಹಣೆ ತೋರಿರುವ ಏಕೈಕ ಕರೆನ್ಸಿ ಪಾಕಿಸ್ತಾನದ ರೂಪಾಯಿ ಆಗಿದೆ. ಬಾಹ್ಯ ಸಾಲದ ಹೊರೆ ಅನುಭವಿಸುತ್ತಿರುವ ಪಾಕಿಸ್ತಾನದ ಕರೆನ್ಸಿ ಶೇಕಡಾ 3.53ರಷ್ಟು ಕುಸಿದಿತ್ತು.
ಏಷ್ಯಾದ ಇತರ ಕರೆನ್ಸಿಗಳಿಗೆ ಹೋಲಿಸಿದರೆ, ದೇಶದ ವಿದೇಶೀ ವಿನಿಮಯ ಮಾರುಕಟ್ಟೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಗರಿಷ್ಠ ಮಟ್ಟಿಗೆ ನಿಬಂಧನೆಗಳನ್ನು ಹೇರಿದ್ದರಿಂದಾಗಿ, ದುರ್ಬಲ ಅಮೆರಿಕನ್ ಡಾಲರ್ ಹಾಗೂ ವಿದೇಶಿ ನಿಧಿ ಒಳಹರಿವಿನ ಪ್ರಯೋಜನ ಪಡೆಯುವಲ್ಲಿ ಭಾರತೀಯ ರೂಪಾಯಿ ವಿಫಲವಾಗಿದೆ.
ಭಾರತ ಹಾಗೂ ಪಾಕಿಸ್ತಾನ ಹೊರತಾಗಿ ಪ್ರವಾಸೋದ್ಯಮದ ಮೇಲೆ ಹೆಚ್ಚು ಅವಲಂಬಿತವಾಗಿರುವ ಥಾಯ್ಲೆಂಡ್‌ನ ಕರೆನ್ಸಿಯು (Baht) ಶೇಕಡಾ 1.42ರಷ್ಟು ಕುಸಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.