ನವದೆಹಲಿ (ರಾಯಿಟರ್ಸ್/ಪಿಟಿಐ): ಆಹಾರ ಧಾನ್ಯಗಳ ಮೇಲೆ ತೆರಿಗೆ ವಿಧಿಸಿರುವುದನ್ನು ವಿರೋಧಿಸಿ ವರ್ತಕರು ಮುಂದಿನ ವಾರ ದೇಶದಾದ್ಯಂತ ಪ್ರತಿಭಟನೆ ನಡೆಸಲಿದ್ದಾರೆ ಎಂದು ಅಖಿಲ ಭಾರತ ವರ್ತಕರ ಒಕ್ಕೂಟದ (ಸಿಎಐಟಿ) ಅಧ್ಯಕ್ಷ ಪ್ರವೀಣ್ ಖಂಡೇಲ್ವಾಲ್ ತಿಳಿಸಿದ್ದಾರೆ.
ಒಕ್ಕೂಟವು ಒಂದು ಕೋಟಿಗೂ ಹೆಚ್ಚು ಸದಸ್ಯರನ್ನು ಪ್ರತಿನಿಧಿಸುತ್ತದೆ. ಸರಣಿ ಪ್ರತಿಭಟನಾ ಸಭೆಗಳು ಜುಲೈ 26ರಿಂದ ಭೋಪಾಲ್‌ನಿಂದ ಶುರುವಾಗಲಿವೆ ಎಂದು ಖಂಡೇಲ್ವಾಲ್ ಹೇಳಿದ್ದಾರೆ.
ದೆಹಲಿಯ ವರ್ತಕರ ಸಂಘಟನೆಯಾಗಿರುವ ಸಿಟಿಐ, ಆಹಾರ ಧಾನ್ಯಗಳ ಮೇಲಿನ ಜಿಎಸ್‌ಟಿ ವಿರೋಧಿಸಿ ಬುಧವಾರ ವರ್ತಕರ ಮಹಾಪಂಚಾಯತ್‌ಗೆ ಕರೆ ನೀಡಿದೆ.
ಹೊಸ ತೆರಿಗೆಗಳ ವಿರುದ್ಧ ಹೋರಾಟ ಹೇಗಿರಬೇಕು ಎಂಬುದನ್ನು ವರ್ತಕ ಸಮುದಾಯದ ಪ್ರಮುಖರು ತೀರ್ಮಾನಿಸಲಿದ್ದಾರೆ ಎಂದು ಸಿಐಟಿ ಅಧ್ಯಕ್ಷ ಬ್ರಿಜೇಶ್ ಗೋಯಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.