ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತೀಯ ತೈಲ ನಿಗಮವು (ಐಒಸಿ) ಫಾರ್ಮುಲಾ ಒನ್ ರೇಸ್‌ನ ಕಾರುಗಳಿಗೆ ಬಳಸುವ ಪೆಟ್ರೋಲ್ ತಯಾರಿಸಲು ನಿರ್ಧರಿಸಿದೆ.
ಒಡಿಶಾದಲ್ಲಿ ಇರುವ ನಿಗಮಕ್ಕೆ ಸೇರಿದ ಪರದೀಪ್ ಸಂಸ್ಕರಣಾ ಘಟಕದಲ್ಲಿ ಇನ್ನು ಮೂರು ತಿಂಗಳೊಳಗೆ ಪೆಟ್ರೋಲ್ ತಯಾರಿಸಲಾಗುವುದು ಎಂದು ಐಒಸಿ ಅಧ್ಯಕ್ಷ ಶ್ರೀಕಾಂತ್ ಮಾಧವ್ ವೈದ್ಯ ತಿಳಿಸಿದ್ದಾರೆ.
‘ಸದ್ಯ ಷೆಲ್ ಕಂಪನಿಯು ಎಫ್1 ರೇಸ್‌ಗೆ ಇಂಧನ ಪೂರೈಸುತ್ತಿದೆ. ಅದೇ ಮಾದರಿಯಲ್ಲಿಯೇ ನಿಗಮದಿಂದಲೂ ಇಂಧನ ಪೂರೈಸಲಾಗುವುದು’ ಎಂದು ತಿಳಿಸಿದ್ದಾರೆ.
ಐಒಸಿಯು ದೇಶದ ತೈಲ ಮಾರುಕಟ್ಟೆಯಲ್ಲಿ ಶೇ 40ರಷ್ಟು ಪಾಲನ್ನು ಹೊಂದಿದೆ. ಆ ಮೂಲಕ ಫಾರ್ಮುಲಾ ಒನ್ ರೇಸ್‌ಗೆ ಬಳಸುವ ಇಂಧನ ತಯಾರಿಸುವ ದೇಶದ ಮೊದಲ ಹಾಗೂ ವಿಶ್ವದ ಬೆರಳೆಣಿಕೆಯಷ್ಟು ಕಂಪನಿಗಳ ಪಟ್ಟಿಗೆ ಸೇರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.