ನವದೆಹಲಿ/ಜ್ಯೂರಿಕ್: ಭಾರತದ ವ್ಯಕ್ತಿಗಳು ಮತ್ತು ಸಂಸ್ಥೆಗಳು ಸ್ವಿಸ್ ಬ್ಯಾಂಕ್‌ನಲ್ಲಿ ಬೇರೆ ಬೇರೆ ರೂಪದಲ್ಲಿ ಇರಿಸಿರುವ ಮೊತ್ತ 14 ವರ್ಷಗಳ ಗರಿಷ್ಠ ಮಟ್ಟವಾದ ₹ 30,500 ಕೋಟಿಗೆ 2021ರಲ್ಲಿ ತಲುಪಿದೆ ಎಂದು ಸ್ವಿಜರ್ಲೆಂಡ್‌ನ ಕೇಂದ್ರೀಯ ಬ್ಯಾಂಕ್ ನೀಡಿರುವ ಅಂಕಿ–ಅಂಶಗಳು ಹೇಳಿವೆ.
2020ರ ಕೊನೆಯಲ್ಲಿ ಭಾರತದ ಗ್ರಾಹಕರು ಸ್ವಿಸ್ ಬ್ಯಾಂಕ್‌ಗಳಲ್ಲಿ ಇರಿಸಿದ ಮೊತ್ತವು ₹ 20,700 ಕೋಟಿಯಷ್ಟಿತ್ತು. ಭಾರತೀಯರು ಜಮಾ ಮಾಡಿರುವ ಹಣದ ಮೊತ್ತ ಸತತ ಎರಡು ವರ್ಷಗಳಿಂದ ಹೆಚ್ಚಾಗುತ್ತಿದೆ.
ಭಾರತದ ಗ್ರಾಹಕರ ಉಳಿತಾಯ ಅಥವಾ ಠೇವಣಿ ಖಾತೆಗಳಲ್ಲಿ ಇರುವ ಹಣವು ಏಳು ವರ್ಷಗಳ ಗರಿಷ್ಠ ಮೊತ್ತವಾದ ₹ 4,800 ಕೋಟಿಗೆ ತಲುಪಿದೆ.
ಇದನ್ನೂ ಓದಿ–ಒಂದು ವರ್ಷದ ಹಿಂದಿನ ಮಟ್ಟಕ್ಕೆ ಇಳಿದ ಸೆನ್ಸೆಕ್ಸ್
ಈ ಅಂಕಿ–ಅಂಶಗಳು ಸ್ವಿಜರ್ಲೆಂಡ್‌ನ ಕೇಂದ್ರೀಯ ಬ್ಯಾಂಕ್ ನೀಡಿರುವ ಅಧಿಕೃತ ಅಂಕಿ–ಅಂಶಗಳು. ಭಾರತೀಯರು ಸ್ವಿಜರ್ಲೆಂಡ್‌ನ ಬ್ಯಾಂಕ್‌ಗಳಲ್ಲಿ ಇರಿಸಿದ್ದಾರೆ ಎನ್ನಲಾಗಿರುವ ಕಪ್ಪುಹಣ ಇದರಲ್ಲಿ ಸೇರಿಲ್ಲ. ಭಾರತೀಯರು, ಅನಿವಾಸಿ ಭಾರತೀಯರು ಬೇರೆ ದೇಶಗಳ ಮೂಲಕ ಸ್ವಿಜರ್ಲೆಂಡ್‌ನ ಬ್ಯಾಂಕ್‌ಗಳಲ್ಲಿ ಇರಿಸಿರುವ ಮೊತ್ತವೂ ಇದರಲ್ಲಿ ಸೇರಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.