ನವದೆಹಲಿ: ದೇಶಿ ಪ್ರಯಾಣಿಕ ವಾಹನ ಮಾರಾಟ ಚೇತರಿಸಿಕೊಳ್ಳುವ ಲಕ್ಷಣವೇ ಕಾಣುತ್ತಿಲ್ಲ. ಜೂನ್‌ನಲ್ಲಿಯೂ ನಕಾರಾತ್ಮಕ ಬೆಳವಣಿಗೆ ಮುಂದುವರಿದಿದೆ.
ಮೇನಲ್ಲಿ ಪ್ರಯಾಣಿಕ ವಾಹನ ಮಾರಾಟ ಶೇ 20.55ರಷ್ಟು ಇಳಿಕೆಯಾಗಿ, 18 ವರ್ಷಗ ಕನಿಷ್ಠ ಮಟ್ಟಕ್ಕೆ ಇಳಿಕೆ ಕಂಡಿತ್ತು. ಗ್ರಾಹಕರಿಂದ ಬೇಡಿಕೆ ಇಲ್ಲದೇ ಇರುವುದರಿಂದ ಮಾರುತಿ ಸುಜುಕಿ, ಹುಂಡೈ, ಟಾಟಾ ಮೋಟರ್ಸ್ ಮತ್ತು ಟೊಯೋಟ ಕಂಪನಿಗಳ ಮಾರಾಟದಲ್ಲಿ ಇಳಿಕೆಯಾಗಿದೆ.
ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪನಿ ಮಾತ್ರವೇ ಪ್ರಯಾಣಿಕ ವಾಹನ ಮಾರಾಟದಲ್ಲಿ ಶೇ 4ರಷ್ಟು ಪ್ರಗತಿ ದಾಖಲಿಸಿದೆ.
ಮಾರುತಿ ಸುಜುಕಿ ಇಂಡಿಯಾದ ಮಾರಾಟ ಶೇ 15.3ರಷ್ಟು ಇಳಿಕೆಯಾಗಿದೆ. ಹುಂಡೈ (ಶೇ 7.3), ಟಾಟಾ ಮೋಟರ್ಸ್ (ಶೇ 27), ಟೊಯೋಟ ಕಿರ್ಲೋಸ್ಕರ್ ಮೋಟರ್ (ಶೇ 19) ಮಾರಾಟದಲ್ಲಿ ಇಳಿಕೆ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.