ನವದೆಹಲಿ: ದೇಶದಲ್ಲಿ ಕಲ್ಲಿದ್ದಲು ಆಮದು ಪ್ರಮಾಣ ಸೆಪ್ಟೆಂಬರ್‌ನಲ್ಲಿ ಶೇ 4.3ರಷ್ಟು ಏರಿಕೆಯಾಗಿ 2.61 ಕೋಟಿ ಟನ್‌ಗೆ ತಲುಪಿದೆ.
ಹಿಂದಿನ ಇದೇ ಅವಧಿಯಲ್ಲಿ 1.97 ಕೋಟಿ ಟನ್ ಆಮದಾಗಿತ್ತು ಎಂದು ಇ–ವಾಣಿಜ್ಯ ಸಂಸ್ಥೆ ಎಂ-ಜಂಕ್ಷನ್ ಸರ್ವಿಸ್ ಲಿಮಿಟೆಡ್ ಅಂಕಿ ಅಂಶ ತಿಳಿಸಿದೆ.
ಕೋಕಿಂಗ್ ಅಲ್ಲದ ಕಲ್ಲಿದ್ದಲು ಆಮದು ಈ ಸೆಪ್ಟೆಂಬರ್‌ನಲ್ಲಿ 1.38 ಕೋಟಿ ಟನ್ ಇದ್ದರೆ, ಹಿಂದಿನ ಇದೇ ಅವಧಿಯಲ್ಲಿ 1.2 ಕೋಟಿ ಟನ್ ಇತ್ತು. ಕೋಕಿಂಗ್ ಕಲ್ಲಿದ್ದಲು ಆಮದು 48 ಲಕ್ಷ ಟನ್‌ನಿಂದ 45 ಲಕ್ಷ ಟನ್‌ಗೆ ಇಳಿಕೆ ಕಂಡಿದೆ. ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್–ಸೆಪ್ಟೆಂಬರ್ ಅವಧಿಗೆ ಹೋಲಿಸಿದರೆ ಕಲ್ಲಿದ್ದಲು ಆಮದು ಹಿಂದಿನ ವರ್ಷದ 1.35 ಕೋಟಿ ಟನ್‌ನಿಂದ 1.24 ಕೋಟಿ ಟನ್‌ಗೆ ಇಳಿಕೆಯಾಗಿದೆ.
2023–24ರ ಆರ್ಥಿಕ ವರ್ಷದ ಏಪ್ರಿಲ್–ಸೆಪ್ಟೆಂಬರ್‌ನಲ್ಲಿ ಕೋಕಿಂಗ್ ಅಲ್ಲದ ಕಲ್ಲಿದ್ದಲು ಆಮದು 7.76 ಕೋಟಿ ಟನ್ ಇದ್ದರೆ, ಹಿಂದಿನ ಇದೇ ಅವಧಿಯಲ್ಲಿ 9.27 ಕೋಟಿ ಟನ್ ಇತ್ತು. ಕೋಕಿಂಗ್ ಕಲ್ಲಿದ್ದಲು ಆಮದು ಈ ವರ್ಷದ ಏಪ್ರಿಲ್–ಸೆಪ್ಟೆಂಬರ್‌ನಲ್ಲಿ 2.94 ಕೋಟಿ ಟನ್‌ಗೆ ಏರಿದ್ದರೆ, ಹಿಂದಿನ ಇದೇ ಅವಧಿಯಲ್ಲಿ ಇದು 2.8 ಕೋಟಿ ಟನ್ ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.