ನವದೆಹಲಿ: ಭಾರತವು ಆಮದು ಮಾಡಿಕೊಳ್ಳುವ ಕಲ್ಲಿದ್ದಲು ಪ್ರಮಾಣವು ಪ್ರಸಕ್ತ ಆರ್ಥಿಕ ಸಾಲಿನ ಏಪ್ರಿಲ್–ಅಕ್ಟೋಬರ್ ಅವಧಿಯಲ್ಲಿ ಶೇ 4.2ರಷ್ಟು ಇಳಿಕೆಯಾಗಿ, 14.81 ಕೋಟಿ ಟನ್‌ಗೆ ತಲುಪಿದೆ.
ಕಳೆದ ಹಣಕಾಸು ಸಾಲಿನಡಿ ದೇಶದ ಕಲ್ಲಿದ್ದಲು ಆಮದು ಗುರಿ ಒಟ್ಟು 15.47 ಕೋಟಿ ಟನ್ ಇತ್ತು.
ಕಳೆದ ಸಾಲಿನ ಏಪ್ರಿಲ್–ಅಕ್ಟೋಬರ್‌ನಲ್ಲಿ ಕೋಕಿಂಗ್ ಅಲ್ಲದ ಕಲ್ಲಿದ್ದಲು ಆಮದು ಪ್ರಮಾಣ 10.4 ಕೋಟಿ ಟನ್ ಇತ್ತು. ಇದಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷದಲ್ಲಿ ಇದೇ ಅವಧಿಯಲ್ಲಿ 9.45 ಕೋಟಿ ಟನ್‌ಗೆ ಇಳಿಕೆಯಾಗಿದೆ ಎಂದು ಇ–ವಾಣಿಜ್ಯ ಸಂಸ್ಥೆಯಾದ ಎಂ-ಜಂಕ್ಷನ್ ಸರ್ವಿಸ್ ಲಿಮಿಟೆಡ್‌ನ ಅಂಕಿ–ಅಂಶ ತಿಳಿಸಿವೆ.
ಅಲ್ಲದೇ, ಪ್ರಸಕ್ತ ಸಾಲಿನ ಮೊದಲು ಏಳು ತಿಂಗಳ ಅವಧಿಯಲ್ಲಿ 3.37 ಕೋಟಿ ಟನ್ ಕೋಕಿಂಗ್ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳಲಾಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 3.27 ಕೋಟಿ ಟನ್ ಆಮದು ಮಾಡಿಕೊಳ್ಳಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.