ADVERTISEMENT

ವಿದೇಶಿ ವಿನಿಮಯ ಸಂಗ್ರಹ ಏರಿಕೆ

ಪಿಟಿಐ
Published 29 ಜೂನ್ 2024, 16:00 IST
Last Updated 29 ಜೂನ್ 2024, 16:00 IST
   

ಮುಂಬೈ: ಕಳೆದ ವಾರ ಇಳಿಕೆ ಕಂಡಿದ್ದ ದೇಶದ ವಿದೇಶಿ  ವಿನಿಮಯ ಮೀಸಲು ಸಂಗ್ರಹವು ಜೂನ್‌ 21ಕ್ಕೆ ಕೊನೆಗೊಂಡ ವಾರದಲ್ಲಿ ಏರಿಕೆಯಾಗಿದೆ. 

₹6,800 ಕೋಟಿ ಹೆಚ್ಚಳವಾಗಿದ್ದು, ಒಟ್ಟು ಮೀಸಲು ಸಂಗ್ರಹವು ₹54.49 ಲಕ್ಷ ಕೋಟಿಗೆ (653.71 ಬಿಲಿಯನ್‌ ಡಾಲರ್‌) ತಲುಪಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ತಿಳಿಸಿದೆ.

ವಿದೇಶಿ ವಿನಿಮಯ ಸಂಗ್ರಹದ ಪ್ರಮುಖ ಭಾಗವಾದ ವಿದೇಶಿ ಕರೆನ್ಸಿಗಳ ಸಂಗ್ರಹವು ಇಳಿಕೆಯಾಗಿದೆ. ₹883 ಕೋಟಿ ಕಡಿಮೆಯಾಗಿದ್ದು, ಒಟ್ಟು ಸಂಗ್ರಹವು ₹47.85 ಲಕ್ಷ ಕೋಟಿ ಆಗಿದೆ ಎಂದು ತಿಳಿಸಿದೆ.

ADVERTISEMENT

ಚಿನ್ನದ ಮೀಸಲು ಸಂಗ್ರಹವು ₹8,236 ಕೋಟಿ ಏರಿಕೆಯಾಗಿದ್ದು, ಒಟ್ಟು ₹4.74 ಲಕ್ಷ ಕೋಟಿಗೆ ಮುಟ್ಟಿದೆ. ಸ್ಪೆಷಲ್‌ ಡ್ರಾಯಿಂಗ್‌ ರೈಟ್ಸ್‌ (ಎಸ್‌ಡಿಆರ್‌) ₹475 ಕೋಟಿ ಇಳಿಕೆಯಾಗಿದ್ದು, ₹1.50 ಲಕ್ಷ ಕೋಟಿ ಆಗಿದೆ ಎಂದು ತಿಳಿಸಿದೆ.

ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿನ (ಐಎಂಎಫ್‌) ಮೀಸಲು ಸಂಗ್ರಹವು ₹75 ಕೋಟಿ ಕಡಿಮೆಯಾಗಿದ್ದು, ₹38,000 ಕೋಟಿ ಆಗಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.