ಮುಂಬೈ: ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹವು ನವೆಂಬರ್ 10ಕ್ಕೆ ಕೊನೆಗೊಂಡ ವಾರದಲ್ಲಿ ₹3,846 ಕೋಟಿ ಕಡಿಮೆ ಆಗಿ ₹48.97 ಲಕ್ಷ ಕೋಟಿಗೆ ಇಳಿಕೆ ಕಂಡಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶುಕ್ರವಾರ ತಿಳಿಸಿದೆ.
ಮೀಸಲು ಸಂಗ್ರಹದಲ್ಲಿ ವಿದೇಶಿ ಕರೆನ್ಸಿಗಳ ಪಾಲು ಹೆಚ್ಚಿನ ಮಟ್ಟದಲ್ಲಿದೆ. ನವೆಂಬರ್ 10ಕ್ಕೆ ಕೊನೆಗೊಂಡ ವಾರದಲ್ಲಿ ವಿದೇಶಿ ಕರೆನ್ಸಿಗಳ ಸಂಗ್ರಹವು ₹899 ಕೋಟಿಯಷ್ಟು ಹೆಚ್ಚಾಗಿ ₹43.32 ಲಕ್ಷ ಕೋಟಿಗೆ ತಲುಪಿದೆ ಎಂದು ಆರ್‌ಬಿಐ ಹೇಳಿದೆ.
ಚಿನ್ನದ ಮೀಸಲು ಸಂಗ್ರಹವು ₹5,061 ಕೋಟಿಯಷ್ಟು ಇಳಿಕೆ ಕಂಡು ₹3.77 ಲಕ್ಷ ಕೋಟಿಗೆ ಇಳಿಕೆ ಕಂಡಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿನ (ಐಎಂಎಫ್) ಭಾರತದ ಕರೆನ್ಸಿ ಸಂಗ್ರಹವು ₹24.90 ಕೋಟಿ ಹೆಚ್ಚಾಗಿ ₹ 39,757 ಕೋಟಿಗೆ ಏರಿಕೆ ಕಂಡಿದೆ ಎಂದು ಆರ್‌ಬಿಐ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.