ADVERTISEMENT

ವಿದೇಶಿ ವಿನಿಮಯ ಮೀಸಲು ಸಂಗ್ರಹ ₹42,081 ಕೋಟಿ ಹೆಚ್ಚಳ

ಪಿಟಿಐ
Published 24 ನವೆಂಬರ್ 2023, 13:04 IST
Last Updated 24 ನವೆಂಬರ್ 2023, 13:04 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ : ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹವು ನವೆಂಬರ್ 17ಕ್ಕೆ ಕೊನೆಗೊಂಡ ವಾರದಲ್ಲಿ ₹42,081 ಕೋಟಿಯಷ್ಟು ಹೆಚ್ಚಾಗಿದ್ದು, ಒಟ್ಟಾರೆ ಮೀಸಲು ಸಂಗ್ರಹವು ₹49.41 ಲಕ್ಷ ಕೋಟಿಗೆ ತಲಪಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಶುಕ್ರವಾರ ತಿಳಿಸಿದೆ.

ನವೆಂಬರ್ 10ಕ್ಕೆ ಕೊನೆಗೊಂಡ ವಾರದಲ್ಲಿ ₹48.99 ಲಕ್ಷ ಕೋಟಿಯಷ್ಟು ಇತ್ತು ಎಂದು ಆರ್‌ಬಿಐ ಹೇಳಿದೆ.

ಮೀಸಲು ಸಂಗ್ರಹದಲ್ಲಿ ವಿದೇಶಿ ಕರೆನ್ಸಿಗಳ ಸಂಗ್ರಹದ ಪಾಲು ಹೆಚ್ಚಿನದ್ದಾಗಿದೆ. ನವೆಂಬರ್ 17ಕ್ಕೆ ಕೊನೆಗೊಂಡ ವಾರದಲ್ಲಿ ವಿದೇಶಿ ಕರೆನ್ಸಿಗಳ ಸಂಗ್ರಹವು ₹36,354 ಕೋಟಿಯಷ್ಟು ಏರಿಕೆ ಕಂಡು ₹43.69 ಲಕ್ಷ ಕೋಟಿಗೆ ತಲುಪಿದೆ‌. ಇದರಿಂದಾಗಿ ಒಟ್ಟಾರೆ ಮೀಸಲು ಸಂಗ್ರಹದಲ್ಲಿಯೂ ಏರಿಕೆ ಕಂಡುಬಂದಿದೆ ಎಂದು ಆರ್‌ಬಿಐ ಮಾಹಿತಿ ನೀಡಿದೆ.

ADVERTISEMENT

ಚಿನ್ನದ ಮೀಸಲು ಸಂಗ್ರಹವು ₹1 ಸಾವಿರ ಕೋಟಿಯಷ್ಟು ಹೆಚ್ಚಾಗಿ ₹1.50 ಲಕ್ಷ ಕೋಟಿಗೆ ತಲುಪಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿನ (ಐಎಂಎಫ್‌) ಭಾರತದ ಮೀಸಲು ಸಂಗ್ರಹವು ₹350 ಕೋಟಿ ಹೆಚ್ಚಾಗಿ ₹40,089 ಕೋಟಿಯಷ್ಟು ಆಗಿದೆ ಎಂದು ಆರ್‌ಬಿಐ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.