ನವದೆಹಲಿ: 2022-23 ರ ಹಣಕಾಸು ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇಕಡ13.5 ರಷ್ಟು ಬೆಳವಣಿಗೆಯಾಗಿದೆ. ಇದು ಸಂಪರ್ಕ ಆಧಾರಿತ ಸೇವಾ ವಲಯ ಮತ್ತು ಯುಟಿಲಿಟಿಯಲ್ಲಿ ಉತ್ತಮ ಬೆಳವಣಿಗೆ ಇದಕ್ಕೆ ಕಾರಣವಾಗಿದೆ.
ಕೋವಿಡ್ -19 ಸಾಂಕ್ರಾಮಿಕದ ಮೊದಲ ಅಲೆಯ ಸಮಯದಲ್ಲಿ 2020ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಜಿಡಿಪಿ ಶೇಕಡ 23.9 ರಷ್ಟು ಕುಗ್ಗಿತ್ತು ಆದರೆ, 2021ರ ಅದೇ ತ್ರೈಮಾಸಿಕದಲ್ಲಿ ಶೇಕಡಾ 20.1 ಶೇಕಡಾ ಬೆಳವಣಿಗೆಯಾಗಿತ್ತು,
ಕಳೆದ ವರ್ಷದ ಜೂನ್ ತ್ರೈಮಾಸಿಕದಲ್ಲಿ ಶೇಕಡ2.2 ಕ್ಕೆ ಹೋಲಿಸಿದರೆ ಕೃಷಿಯು ಶೇಕಡ 4.5 ರಷ್ಟು ಬೆಳವಣಿಗೆ ಕಂಡಿದೆ, ಉತ್ಪಾದನಾ ವಲಯವು ಶೇಕಡ 4.8, ನಿರ್ಮಾಣ ವಲಯವು ಶೇಕಡ 16.8, ವ್ಯಾಪಾರ ಮತ್ತು ಹೋಟೆಲ್ ಉದ್ಯಮಗಳು ಶೇಕಡ 25.7 ರಷ್ಟು ಪ್ರಗತಿ ಸಾಧಿಸಿವೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಮೊದಲ ತ್ರೈಮಾಸಿಕದ ಆರ್ಥಿಕ ಬೆಳವಣಿಗೆ ದರ ಶೇಕಡ 16.2 ರಷ್ಟು ಇರಬಹುದು ಎಂದು ಊಹಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.