ADVERTISEMENT

ಮೂರು ತಿಂಗಳ ಗರಿಷ್ಠ ಮಟ್ಟಕ್ಕೆ ತಯಾರಿಕಾ ಚಟುವಟಿಕೆ

ಪಿಟಿಐ
Published 1 ಡಿಸೆಂಬರ್ 2022, 13:28 IST
Last Updated 1 ಡಿಸೆಂಬರ್ 2022, 13:28 IST

ನವದೆಹಲಿ: ದೇಶದಲ್ಲಿ ತಯಾರಿಕಾ ವಲಯದ ಚಟುವಟಿಕೆಗಳು ನವೆಂಬರ್‌ನಲ್ಲಿ ಮೂರು ತಿಂಗಳ ಗರಿಷ್ಠ ಮಟ್ಟವನ್ನು ತಲುಪಿವೆ. ರಫ್ತು ಹೆಚ್ಚಾಗಿದ್ದು ಹಾಗೂ ಮಾರುಕಟ್ಟೆಯಲ್ಲಿ ಬೇಡಿಕೆಯು ಸ್ಥಿರವಾಗಿ ಇದ್ದಿದ್ದು ಈ ಏರಿಕೆಗೆ ಕಾರಣ.

ಎಸ್‌ಆ್ಯಂಡ್‌ಪಿ ಗ್ಲೋಬಲ್ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್ (ಪಿಎಂಐ) ನವೆಂಬರ್‌ನಲ್ಲಿ 55.7ಕ್ಕೆ ತಲುಪಿದೆ. ಇದು ಅಕ್ಟೋಬರ್‌ನಲ್ಲಿ 55.3 ಆಗಿತ್ತು.

ತಯಾರಿಕಾ ವಲಯದ ಒಟ್ಟಾರೆ ಕಾರ್ಯಾಚರಣೆ ಪರಿಸ್ಥಿತಿಯು ಸತತ 17ನೆಯ ತಿಂಗಳಿನಲ್ಲಿಯೂ ಸುಧಾರಿಸಿದೆ ಎಂಬುದನ್ನು ನವೆಂಬರ್‌ ತಿಂಗಳ ಪಿಎಂಐ ಅಂಕಿ–ಅಂಶ ಹೇಳುತ್ತಿದೆ. ಪಿಎಂಐ ಸೂಚ್ಯಂಕವು 50ಕ್ಕಿಂತ ಹೆಚ್ಚಿನ ಮಟ್ಟದಲ್ಲಿದ್ದರೆ ಅದನ್ನು ಬೆಳವಣಿಗೆ ಎಂದು ಪರಿಗಣಿಸಲಾಗುತ್ತದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.