ನವದೆಹಲಿ: ದೇಶದ ಗಣಿಗಾರಿಕೆ ವಲಯವು 2023–24ನೇ ಆರ್ಥಿಕ ವರ್ಷದಲ್ಲಿ ಶೇ 7.5ರಷ್ಟು ಪ್ರಗತಿ ಕಂಡಿದೆ.
2022–23ನೇ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಕಬ್ಬಿಣದ ಅದಿರು ಮತ್ತು ಸುಣ್ಣದ ಕಲ್ಲು ಉತ್ಪಾದನೆಯಲ್ಲಿ ಹೆಚ್ಚಿನ ಬೆಳವಣಿಗೆ ದಾಖಲಿಸಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಕಬ್ಬಿಣದ ಅದಿರು ಉತ್ಪಾದನೆಯು 25.8 ಕೋಟಿ ಟನ್‌ನಿಂದ 27.7 ಕೋಟಿ ಟನ್‌ಗೆ (ಶೇ 7.4) ಏರಿಕೆಯಾಗಿದೆ. ಸುಣ್ಣದ ಕಲ್ಲು ಉತ್ಪಾದನೆಯಲ್ಲಿ ಶೇ 10.7ರಷ್ಟು ಹೆಚ್ಚಳವಾಗಿದೆ. 40.6 ಕೋಟಿ ಟನ್‌ನಿಂದ 45 ಕೋಟಿ ಟನ್‌ಗೆ ಏರಿಕೆಯಾಗಿದೆ.
ಅಲ್ಯೂಮಿನಿಯಂ ಉತ್ಪಾದನೆಯು 40.73 ಲಕ್ಷ ಟನ್‌ನಿಂದ 41.59 ಲಕ್ಷ ಟನ್‌ಗೆ ಮುಟ್ಟಿದೆ.
ಭಾರತವು ಅಲ್ಯೂಮಿನಿಯಂ ಉತ್ಪಾದನೆಯಲ್ಲಿ ಜಗತ್ತಿನಲ್ಲಿ ಎರಡನೇ ಅತಿದೊಡ್ಡ ರಾಷ್ಟ್ರವಾಗಿದೆ. ಸುಣ್ಣದ ಕಲ್ಲು ಉತ್ಪಾದನೆಯಲ್ಲಿ ಮೂರನೇ ಹಾಗೂ ಕಬ್ಬಿಣದ ಅದಿರು ಉತ್ಪಾದನೆಯಲ್ಲಿ ನಾಲ್ಕನೇ ಅತಿದೊಡ್ಡ ರಾಷ್ಟ್ರವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.