ನವದೆಹಲಿ: ಆಕಾಸಾ ಏರ್ ಕಂಪನಿಯು ಆಗಸ್ಟ್ 7ರಿಂದ ವಿಮಾನಯಾನ ಸೇವೆ ಆರಂಭಿಸಲಿದ್ದು, ಬುಕಿಂಗ್‌ಗೆ ಚಾಲನೆ ನೀಡಲಾಗಿದೆ ಎಂದು ಕಂಪನಿಯು ಶುಕ್ರವಾರ ತಿಳಿಸಿದೆ.
ಬೆಂಗಳೂರು–ಕೊಚ್ಚಿ ಹಾಗೂ ಮುಂಬೈ–ಅಹಮದಾಬಾದ್ ನಡುವೆ ವಾರದಲ್ಲಿ ಒಟ್ಟು 56 ಬಾರಿ ಬೋಯಿಂಗ್ 737 ಮ್ಯಾಕ್ಸ್ ವಿಮಾನವು ಸಂಚರಿಸಲಿದೆ ಎಂದು ಕಂಪನಿಯು ತಿಳಿಸಿದೆ.
ದೇಶದಾದ್ಯಂತ ಮಹಾನಗರಗಳಿಂದ ಎರಡು ಮತ್ತು ಮೂರನೇ ಶ್ರೇಣಿಯ ನಗರಗಳಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಗಮನ ಹರಿಸಲಾಗಿದೆ ಎಂದು ಕಂಪನಿಯ ಸಹ ಸ್ಥಾಪಕ ಪ್ರವೀಣ್ ಅಯ್ಯರ್ ತಿಳಿಸಿದ್ದಾರೆ.
ಹಂತ ಹಂತವಾಗಿ ಸೇವೆಯನ್ನು ವಿಸ್ತರಿಸಲಾಗುವುದು. ಪ್ರತಿ ತಿಂಗಳೂ ಹೊಸ ವಿಮಾನ ಹೊಂದಿ, ಹೆಚ್ಚಿನ ನಗರಗಳಿಗೆ ಸಂಪರ್ಕ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.