ADVERTISEMENT

ಜೂನ್‌ 4ರಂದು ಷೇರು ಮಾರುಕಟ್ಟೆ ಕುಸಿತ: ತನಿಖೆಗೆ ರಾಹುಲ್ ಗಾಂಧಿ ಆಗ್ರಹ

ರಾಯಿಟರ್ಸ್
Published 6 ಜೂನ್ 2024, 15:36 IST
Last Updated 6 ಜೂನ್ 2024, 15:36 IST
<div class="paragraphs"><p>ರಾಹುಲ್ ಗಾಂಧಿ</p></div>

ರಾಹುಲ್ ಗಾಂಧಿ

   

ಪಿಟಿಐ ಚಿತ್ರ

ನವದೆಹಲಿ: ಇತ್ತೀಚೆಗೆ ಷೇರು ಮಾರುಕಟ್ಟೆಯ ದಿಢೀರ್ ಕುಸಿತದಿಂದಾಗಿ ಸುಮಾರು 5 ಕೋಟಿ ಹೂಡಿಕೆದಾರರು ₹30ಲಕ್ಷ ಕೋಟಿಯನ್ನು ಕಳೆದುಕೊಂಡಿದ್ದು, ಈ ಕುರಿತು ಜಂಟಿ ಸಂಸದೀಯ ಸಮಿತಿ ಮೂಲಕ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಗುರುವಾರ ಆಗ್ರಹಿಸಿದ್ದಾರೆ.

ADVERTISEMENT

ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ನರೇಂದ್ರ ಮೋದಿ ಹಾಗೂ ಬಿಜೆಪಿಯ ಇತರ ಮುಖಂಡರು ಮಾರುಕಟ್ಟೆ ಜೂನ್ 4ರಂದು ಮಾರುಕಟ್ಟೆ ಏರಲಿದೆ ಎಂದು ಹೇಳಿದ್ದರು. ಗೃಹ ಸಚಿವ ಅಮಿತ್ ಶಾ ಕೂಡ ಟಿ.ವಿ. ಸಂದರ್ಶನದಲ್ಲಿ ಜೂನ್‌ 4ರಂದು ಮಾರುಕಟ್ಟೆ ಜಿಗಿತ ಕುರಿತು ಮಾತನಾಡಿದ್ದರು. ಆದರೆ ಮಂಗಳವಾರ ಷೇರು ಪೇಟೆ ನಾಲ್ಕು ವರ್ಷಗಳ ಹಿಂದಿನ ಅಂಕಿಅಂಶಕ್ಕೆ ಕುಸಿದಿತ್ತು. ಸುಮಾರ ಶೇ 6ರಷ್ಟು ಕುಸಿತ ಕಂಡಿತು’ ಎಂದಿದ್ದಾರೆ.

‘ಶನಿವಾರ ಪ್ರಸಾರವಾದ ಚುನಾವಣೋತ್ತರ ಸಮೀಕ್ಷೆ ಆಧರಿಸಿ, ಷೇರು ಮಾರುಕಟ್ಟೆ ಸೋಮವಾರ ಕುಸಿದಿದೆ. ಮತ ಎಣಿಕೆಯ ಮುನ್ನಾದಿನ ಎನ್‌ಎಸ್ಇ ನಿಫ್ಟಿ 50 ಹಾಗೂ ಎಸ್‌ಅಂಡ್‌ಪಿ ಬಿಎಸ್‌ಇ ಸೆನ್ಸೆಕ್ಸ್‌ ಕ್ರಮವಾಗಿ ಶೇ 3.3ರಷ್ಟು ಹಾಗೂ ಶೇ 3.4ರಷ್ಟು ಏರಿಕೆ ಕಂಡಿತ್ತು. ಫಲಿತಾಂಶ ದಿನ ಷೇರು ಪೇಟೆ ಕುಸಿತದ ಹಿಂದೆ ಯಾವ ವಿದೇಶಿ ಹೂಡಿಕೆದಾರರ ವಹಿವಾಟು ಅಡಗಿದೆ ಎಂಬುದು ಬಹಿರಂಗವಾಗಬೇಕಿದೆ. ಹೀಗಾಗಿ ತನಿಖೆ ನಡೆಸುವುದು ಅನಿವಾರ್ಯ’ ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.