ನವದೆಹಲಿ: ಪ್ರಸಕ್ತ ವರ್ಷದ ಏಪ್ರಿಲ್–ನವೆಂಬರ್ ಅವಧಿಯಲ್ಲಿ ದೇಶದಲ್ಲಿ ವಿದ್ಯುತ್ ಬಳಕೆಯು ಶೇ 9ರಷ್ಟು ಹೆಚ್ಚಾಗಿದ್ದು, 1.09 ಲಕ್ಷ ಕೋಟಿ ಯೂನಿಟ್‌ಗೆ ತಲುಪಿದೆ.
2022-23ನೇ ಸಾಲಿನ ಏಪ್ರಿಲ್-ನವೆಂಬರ್‌ನಲ್ಲಿ ವಿದ್ಯುತ್ ಬಳಕೆಯು 1.01 ಲಕ್ಷ ಕೋಟಿ ಯೂನಿಟ್ ಇದ್ದರೆ, 2021–22ರಲ್ಲಿ 91,600 ಕೋಟಿ ಯೂನಿಟ್ ಇತ್ತು. 2022–23ರ ಪೂರ್ಣ ಆರ್ಥಿಕ ವರ್ಷದಲ್ಲಿ ವಿದ್ಯುತ್ ಬಳಕೆಯು 1.50 ಲಕ್ಷ ಕೋಟಿ ಯೂನಿಟ್ ಇದ್ದರೆ, ಕಳೆದ ವರ್ಷದ ಇದೇ ಅವಧಿಯಲ್ಲಿ 1.37 ಲಕ್ಷ ಕೋಟಿ ಯೂನಿಟ್ ಇತ್ತು ಎಂದು ವಿದ್ಯುತ್ ಸಚಿವಾಲಯ ವಿವರಿಸಿದೆ.
ಪ್ರಸಕ್ತ ವರ್ಷದ ಮೊದಲ ಎಂಟು ತಿಂಗಳಲ್ಲಿ ಶೇ 9ರಷ್ಟು ವಿದ್ಯುತ್ ಬಳಕೆ ಹೆಚ್ಚಳವಾಗಿದೆ. ಇದು ಆರ್ಥಿಕ ಚಟುವಟಿಕೆಗಳ ಚೇತರಿಕೆಯನ್ನು ತೋರಿಸುತ್ತದೆ ಎಂದು ಕೈಗಾರಿಕಾ ತಜ್ಞರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.