ನವದೆಹಲಿ: ಭಾರತವು ಈ ವರ್ಷದ ನವೆಂಬರ್‌ನಲ್ಲಿ ತನ್ನ ಕಚ್ಚಾ ಉಕ್ಕು ಉತ್ಪಾದನೆಯಲ್ಲಿ ಶೇ 11.4ರಷ್ಟು ಹೆಚ್ಚಳವನ್ನು ದಾಖಲಿಸಿ, 1.17 ಕೋಟಿ ಟನ್‌ಗೆ ತಲುಪಿದೆ ಎಂದು ಜಾಗತಿಕ ಉಕ್ಕು ಸಂಘಟನೆ (ವರ್ಲ್ಡ್ ಸ್ಟೀಲ್) ತಿಳಿಸಿದೆ.
ಜನವರಿ-ನವೆಂಬರ್ ಅವಧಿಯಲ್ಲಿ, ದೇಶದ ಉತ್ಪಾದನೆಯು ಶೇ 12.1ರಷ್ಟು ಏರಿಕೆಯಾಗಿ 12.82 ಕೋಟಿ ಟನ್‌ಗೆ ಮುಟ್ಟಿದೆ ಎಂದು ಜಾಗತಿಕ ಸಂಸ್ಥೆ ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.
ಜಾಗತಿಕ ಉಕ್ಕು ಉತ್ಪಾದನೆಯು ನವೆಂಬರ್‌ನಲ್ಲಿ 14.55 ಕೋಟಿ ಟನ್ ಇತ್ತು. 2022ರ ಇದೇ ತಿಂಗಳಿಗಿಂತ ಶೇ 3.3ರಷ್ಟು ಹೆಚ್ಚಾಗಿದೆ. 2023ರ ಜನವರಿ–ನವೆಂಬರ್‌ನಲ್ಲಿ ಜಾಗತಿಕ ಉತ್ಪಾದನೆ ಶೇ 0.5ರಷ್ಟು ಏರಿಕೆಯಾಗಿ 171.5 ಕೋಟಿ ಟನ್‌ಗೆ ತಲುಪಿದೆ ಎಂದು ವರ್ಲ್ಡ್ ಸ್ಟೀಲ್ ಅಸೋಸಿಯೇಷನ್ ತಿಳಿಸಿದೆ.
ಪ್ರಸ್ತುತ ವರ್ಷದ ನವೆಂಬರ್‌ನಲ್ಲಿ ಚೀನಾವು 7.61 ಕೋಟಿ ಟನ್, ಅಮೆರಿಕ 66 ಲಕ್ಷ ಟನ್, ರಷ್ಯಾ 64 ಲಕ್ಷ ಟನ್, ದಕ್ಷಿಣ ಕೊರಿಯಾ 54 ಲಕ್ಷ ಟನ್, ಜರ್ಮನಿ 27 ಲಕ್ಷ ಟನ್, ಟರ್ಕಿ 30 ಲಕ್ಷ ಟನ್ ಮತ್ತು ಬ್ರೆಜಿಲ್ 27 ಲಕ್ಷ ಟನ್ ಉಕ್ಕು ಉತ್ಪಾದಿಸಿವೆ. ಆದರೆ ಜಪಾನ್‌ನ ಉತ್ಪಾದನೆಯು ಶೇ 0.9ರಷ್ಟು ಇಳಿಕೆಯಾಗಿ 71 ಲಕ್ಷ ಟನ್‌ಗೆ ತಲುಪಿದೆ ಎಂದು ವರ್ಲ್ಡ್ ಸ್ಟೀಲ್ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.