ADVERTISEMENT

India's Trade Deficit: ಹಿಗ್ಗಿದ ವ್ಯಾಪಾರ ಕೊರತೆ

ಪಿಟಿಐ
Published 14 ನವೆಂಬರ್ 2024, 16:18 IST
Last Updated 14 ನವೆಂಬರ್ 2024, 16:18 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಅಕ್ಟೋಬರ್‌ ತಿಂಗಳಿನಲ್ಲಿ ರಫ್ತಿಗಿಂತಲೂ ಆಮದು ಪ್ರಮಾಣ ಹೆಚ್ಚಾಗಿದ್ದು, ವಿದೇಶಿ ವ್ಯಾಪಾರದ ಕೊರತೆಯು ₹2.29 ಲಕ್ಷ ಕೋಟಿ ಆಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ.‌

ರಫ್ತುವಿನ ಮೌಲ್ಯಕ್ಕಿಂತ ಆಮದು ಮೌಲ್ಯವೇ ಹೆಚ್ಚು ಇದ್ದರೆ, ಈ ಅಂತರವನ್ನು ವ್ಯಾಪಾರ ಕೊರತೆ ಎನ್ನಲಾಗುತ್ತದೆ. 

ರಫ್ತು ಪ್ರಮಾಣದಲ್ಲಿ ಶೇ 17.25ರಷ್ಟು ಏರಿಕೆಯಾಗಿದೆ. ಒಟ್ಟು ₹3.31 ಲಕ್ಷ ಕೋಟಿ ಮೌಲ್ಯದ ಸರಕುಗಳನ್ನು ರಫ್ತು ಮಾಡಲಾಗಿದೆ. ಇದು ಕಳೆದ ಒಂದು ದಶಕದಲ್ಲಿ ತಿಂಗಳೊಂದರಲ್ಲಿ ಆಗಿರುವ ಅತಿಹೆಚ್ಚು ರಫ್ತು ಪ್ರಮಾಣವಾಗಿದೆ ಎಂದು ಕೇಂದ್ರ ವಿವರಿಸಿದೆ. 

ADVERTISEMENT

ಆದರೆ, ಆಮದು ಪ್ರಮಾಣವು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 3.9ರಷ್ಟು ಹೆಚ್ಚಳವಾಗಿದೆ. ಒಟ್ಟು ₹5.60 ಲಕ್ಷ ಕೋಟಿ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಳ್ಳಲಾಗಿದೆ ಎಂದು ಹೇಳಿದೆ.

‘ಅಕ್ಟೋಬರ್‌ನಲ್ಲಿ ರಫ್ತು ಪ್ರಮಾಣ ಹೆಚ್ಚಾ‌ಗಿದ್ದು, ಇದೇ ಸ್ಥಿತಿ ಮುಂದುವರಿಯಲಿದೆ. ಈ ವರ್ಷದಲ್ಲಿ ದೇಶದ ರಫ್ತು ಮೌಲ್ಯವು ₹67.56 ಲಕ್ಷ ಕೋಟಿ ದಾಟುವ ನಿರೀಕ್ಷೆಯಿದೆ’ ಎಂದು ಕೇಂದ್ರ ವಾಣಿಜ್ಯ ಸಚಿವಾಲಯದ ಕಾರ್ಯದರ್ಶಿ ಸುನಿಲ್ ಬರ್ತ್ವಾಲ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.