ADVERTISEMENT

ಇಂಡಿಗೊ ಲಾಭ ಶೇ 12ರಷ್ಟು ಇಳಿಕೆ

ಪಿಟಿಐ
Published 26 ಜುಲೈ 2024, 15:45 IST
Last Updated 26 ಜುಲೈ 2024, 15:45 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಇಂಡಿಗೊ ಕಂಪನಿಯ ಮಾತೃಸಂಸ್ಥೆ ಇಂಟರ್‌ಗ್ಲೋಬಲ್‌ ಏವಿಯೇಷನ್‌, 2024–25ನೇ ಆರ್ಥಿಕ ವರ್ಷದ ಜೂನ್‌ ತ್ರೈಮಾಸಿಕದಲ್ಲಿ ₹2,728 ಕೋಟಿ ತೆರಿಗೆ ನಂತರದ ಲಾಭ ಗಳಿಸಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹3,090 ಕೋಟಿ ಲಾಭ ಗಳಿಸಲಾಗಿತ್ತು. ಈ ಲಾಭಕ್ಕೆ ಹೋಲಿಸಿದರೆ ಶೇ 12ರಷ್ಟು ಇಳಿಕೆಯಾಗಿದೆ. ವಿಮಾನದ ಇಂಧನ ದರದ (ಎಟಿಎಫ್‌) ಏರಿಕೆ ಮತ್ತು ವೆಚ್ಚ ಹೆಚ್ಚಳದಿಂದಾಗಿ ಲಾಭದ ಪ್ರಮಾಣ ಕಡಿಮೆಯಾಗಿದೆ ಎಂದು ವಿಮಾನಯಾನ ಸಂಸ್ಥೆ ಶುಕ್ರವಾರ ತಿಳಿಸಿದೆ.

ಈ ತ್ರೈಮಾಸಿಕದಲ್ಲಿ ಒಟ್ಟು ವರಮಾನವು ₹20,248 ಕೋಟಿ ಆಗಿದೆ. ಹಿಂದಿನ ಹಣಕಾಸು ವರ್ಷದ ಜೂನ್‌ ತ್ರೈಮಾಸಿಕದಲ್ಲಿ ₹17,160 ಕೋಟಿ ಗಳಿಸಿತ್ತು. ಒಟ್ಟಾರೆ ವೆಚ್ಚದಲ್ಲಿ ಶೇ 24ರಷ್ಟು ಜಿಗಿತವಾಗಿದ್ದು, ₹17,444 ಕೋಟಿಗೆ ತಲುಪಿದೆ.

ADVERTISEMENT

ಏರ್‌ಕ್ರಾಫ್ಟ್‌ ಮತ್ತು ಎಂಜಿನ್‌ಗಳನ್ನು ಬಾಡಿಗೆ ನಿಡುವ ಮೂಲಕ ₹624 ಕೋಟಿ ಗಳಿಸಲಾಗಿದೆ. ಜೂನ್‌ ಅಂತ್ಯದ ವೇಳೆಗೆ ವಿಮಾನ ಸಂಸ್ಥೆಯು 18 ಏರ್‌ಕ್ರಾಫ್ಟ್‌ ಸೇರಿದಂತೆ 382 ವಿಮಾನಗಳನ್ನು ಒಳಗೊಂಡಿದೆ ಎಂದು ಸಂಸ್ಥೆ ತಿಳಿಸಿದೆ.

ಬಿಎಸ್‌ಇಯಲ್ಲಿ ಕಂಪನಿಯ ಪ್ರತಿ ಷೇರಿನ ಮೌಲ್ಯ ಶೇ 1.37ರಷ್ಟು ಏರಿಕೆಯಾಗಿ, ಪ್ರತಿ ಷೇರಿನ ಬೆಲೆ ₹4,491ಕ್ಕೆ ಮುಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.