ADVERTISEMENT

ಕೈಗಾರಿಕಾ ಬೆಳವಣಿಗೆ ಕುಸಿತ

ಪಿಟಿಐ
Published 11 ಜನವರಿ 2019, 20:00 IST
Last Updated 11 ಜನವರಿ 2019, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೈಗಾರಿಕಾ ತಯಾರಿಕೆ ಬೆಳವಣಿಗೆಯು ನವೆಂಬರ್‌ ತಿಂಗಳಲ್ಲಿ ಶೇ 0.5ರಷ್ಟಾಗಿ, 17 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ.

ತಯಾರಿಕೆ ವಲಯದಲ್ಲಿ ಅದರಲ್ಲೂ ವಿಶೇಷವಾಗಿ ಗ್ರಾಹಕರ ಮತ್ತು ಭಾರಿ ಯಂತ್ರೋಪಕರಣಗಳ ತಯಾರಿಕೆಯಲ್ಲಿನ ಕುಸಿತದ ಫಲವಾಗಿ ಬೆಳವಣಿಗೆ ದರ ಕುಸಿದಿದೆ.

ಕೈಗಾರಿಕಾ ತಯಾರಿಕಾ ಸೂಚ್ಯಂಕದ (ಐಐಪಿ) ಸ್ವರೂಪದಲ್ಲಿ ಅಳೆಯಲಾಗುವ ಕಾರ್ಖಾನೆಗಳ ತಯಾರಿಕೆಯು ವರ್ಷದ ಹಿಂದಿನ ಇದೇ ಅವಧಿಯಲ್ಲಿ ಶೇ 8.5ರಷ್ಟು ಪ್ರಗತಿ ದಾಖಲಿಸಿತ್ತು. ಈ ವರ್ಷದ ಅಕ್ಟೋಬರ್‌ ತಿಂಗಳ ಪ್ರಗತಿಯನ್ನು ಶೇ 8.1 ರಿಂದ ಶೇ 8.5ಕ್ಕೆ ಪರಿಷ್ಕರಿಸಲಾಗಿದೆ. 2017ರ ಜೂನ್‌ ತಿಂಗಳ ‘ಐಐಪಿ’ ಪ್ರಗತಿಯು ಶೇ 0.3ರಷ್ಟಾಗಿತ್ತು.

ADVERTISEMENT

ಏಪ್ರಿಲ್‌ – ನವೆಂಬರ್‌ ಅವಧಿಯಲ್ಲಿನ ಕೈಗಾರಿಕಾ ತಯಾರಿಕೆಯು ಶೇ 5ರಷ್ಟಾಗಿದೆ. ಒಂದು ವರ್ಷದ ಹಿಂದಿನ ಇದೇ ಅವಧಿಯಲ್ಲಿ ಈ ಪ್ರಮಾಣವು ಶೇ 3.2ರಷ್ಟಿತ್ತು. ‘ಐಐಪಿ’ಯಲ್ಲಿ ಶೇ 77.63ರಷ್ಟು ಪಾಲು ಹೊಂದಿರುವ ತಯಾರಿಕಾ ವಲಯದ ಪ್ರಗತಿಯು ನವೆಂಬರ್‌ನಲ್ಲಿ ಶೇ 0.4ರಷ್ಟಾಗಿದೆ. ಒಂದು ವರ್ಷದ ಹಿಂದೆ ಇದು ಶೇ 10.4ರಷ್ಟಿತ್ತು ಎಂದು ಕೇಂದ್ರೀಯ ಸಾಂಖ್ಯಿಕ ಕಚೇರಿ (ಸಿಎಸ್‌ಒ) ಬಿಡುಗಡೆ ಮಾಡಿರುವ ಅಂಕಿಅಂಶಗಳಿಂದ ತಿಳಿದು ಬಂದಿದೆ.

ಗಣಿಗಾರಿಕೆ (ಶೇ 2.7), ವಿದ್ಯುತ್‌ (ಶೇ 5.1), ಭಾರಿ ಯಂತ್ರೋಪಕರಣ (ಶೇ 3.4) ಮತ್ತು ಗೃಹೋಪಯೋಗಿ ಸಲಕರಣೆ ತಯಾರಿಕೆಯು ಶೇ 0.9ರಷ್ಟು ಕುಸಿತ ಕಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.