ನವದೆಹಲಿ: ಮೇ ತಿಂಗಳಲ್ಲಿ ದೇಶದ ಕೈಗಾರಿಕಾ ಉತ್ಪಾದನೆ ಪ್ರಮಾಣವು ಶೇಕಡ 5.2ರಷ್ಟು ಹೆಚ್ಚಳವಾಗಿದೆ. ಇದು ಏಪ್ರಿಲ್‌ನಲ್ಲಿ ಶೇ 4.5ರಷ್ಟು ಇತ್ತು. ತಯಾರಿಕೆ ಹಾಗೂ ಗಣಿಗಾರಿಕೆ ವಲಯಗಳಲ್ಲಿನ ಉತ್ತಮ ಬೆಳವಣಿಗೆಯ ಕಾರಣದಿಂದಾಗಿ ಈ ಏರಿಕೆ ಕಂಡುಬಂದಿದೆ.
ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಬಿಡುಗಡೆ ಮಾಡಿರುವ ಅಂಕಿ–ಅಂಶಗಳ ಪ್ರಕಾರ ತಯಾರಿಕಾ ವಲಯದ ಉತ್ಪಾದನೆಯು ಶೇ 5.7ರಷ್ಟು ಹೆಚ್ಚಾಗಿದೆ. ವಿದ್ಯುತ್ ಉತ್ಪಾದನೆಯು ಶೇ 0.9ರಷ್ಟು ಜಾಸ್ತಿಯಾಗಿದೆ. ಗಣಿಗಾರಿಕೆಯ ಉತ್ಪಾದನೆಯು ಶೇ 6.4ರಷ್ಟು ಹೆಚ್ಚಾಗಿದೆ. ಬಂಡವಾಳ ಸರಕು ವಲಯವು ಶೇ 8.2ರಷ್ಟು ಏರಿಕೆ ಕಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.