ADVERTISEMENT

ಜುಲೈನ ಕೈಗಾರಿಕಾ ಬೆಳವಣಿಗೆ ಕುಂಠಿತ

ಚಿಲ್ಲರೆ ಹಣದುಬ್ಬರ ಅಲ್ಪ ಇಳಿಕೆ

ಪಿಟಿಐ
Published 12 ಸೆಪ್ಟೆಂಬರ್ 2019, 20:00 IST
Last Updated 12 ಸೆಪ್ಟೆಂಬರ್ 2019, 20:00 IST
   

ನವದೆಹಲಿ: ಜನರ ಖರೀದಿ ಸಾಮರ್ಥ್ಯ ಉಡುಗಿರುವುದರಿಂದ ಎಲ್ಲಾ ವಲಯಗಳಲ್ಲಿಯೂ ನಕಾರಾತ್ಮಕ ಪ್ರಗತಿ ಕಂಡುಬರುತ್ತಿದೆ.

ಮೂಲಸೌಕರ್ಯ, ಸೇವಾ ವಲಯ, ಕೈಗಾರಿಕೆಗಳ ಬೆಳವಣಿಗೆ ಕುಸಿಯುತ್ತಿದ್ದು, ಚಿಲ್ಲರೆ ಹಣದುಬ್ಬರವೂ ಇಳಿಮುಖವಾಗಿದೆ.

ಜುಲೈ ತಿಂಗಳ ಕೈಗಾರಿಕಾ ಪ್ರಗತಿ ಇಳಿಕೆ ಮತ್ತು ಆಗಸ್ಟ್‌ ತಿಂಗಳ ಚಿಲ್ಲರೆ ಹಣದುಬ್ಬರದಲ್ಲಿನ ಏರಿಕೆಯು ದೇಶದ ಆರ್ಥಿಕ ಹಿಂಜರಿತದ ಸ್ಪಷ್ಟ ಚಿತ್ರಣವನ್ನು ನೀಡುತ್ತಿವೆ.

ADVERTISEMENT

ಕೈಗಾರಿಕೆಗಳ ತಯಾರಿಕಾ ಸೂಚ್ಯಂಕದ (ಐಐಪಿ) ಮೇಲೆ ಲೆಕ್ಕಹಾಕುವ ದೇಶದ ಕೈಗಾರಿಕಾ ಪ್ರಗತಿಯು ಜುಲೈನಲ್ಲಿ ಶೇ 2.2ರಷ್ಟು ಇಳಿಕೆಯಾಗಿದ್ದು, ಶೇ 4.3ಕ್ಕೆ ತಲುಪಿದೆ ಎಂದು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಮಾಹಿತಿ ನೀಡಿದೆ.

ತಯಾರಿಕಾ ವಲಯದ 23 ಕೈಗಾರಿಕೆಗಳಲ್ಲಿ 13 ಕೈಗಾರಿಕೆಗಳ ಪ್ರಗತಿಯು ಸಕಾರಾತ್ಮಕ ಮಟ್ಟದಲ್ಲಿವೆ.2018ರ ಜುಲೈ ತಿಂಗಳಿನಲ್ಲಿ ಐಐಪಿ ಶೇ 6.5ರಷ್ಟಿತ್ತು.

ಚಿಲ್ಲರೆ ಹಣದುಬ್ಬರ ಅಲ್ಪ ಏರಿಕೆ
ಚಿಲ್ಲರೆ ಹಣದುಬ್ಬರವು ಆಗಸ್ಟ್‌ನಲ್ಲಿ ಶೇ 3.15 ರಿಂದ ಶೇ 3.21ಕ್ಕೆ ಅಲ್ಪ ಏರಿಕೆ ಕಂಡಿದೆ. ಆಹಾರ ಉತ್ಪನ್ನಗಳು ತುಟ್ಟಿಯಾಗಿರುವುದರಿಂದ ಗ್ರಾಹಕರ ಬೆಲೆ ಸೂಚ್ಯಂಕ ಆಧರಿಸಿದ ಚಿಲ್ಲರೆ ಹಣದುಬ್ಬರದಲ್ಲಿ ಅಲ್ಪ ಏರಿಕೆ ಕಂಡುಬಂದಿದೆ.

ಗ್ರಾಮೀಣ ಭಾಗದಲ್ಲಿ ಹಣದುಬ್ಬರ ಶೇ 2.18ರಷ್ಟಿದ್ದರೆ ನಗರ ಪ್ರದೇಶದಲ್ಲಿ ಶೇ 4.49ರಷ್ಟಿದೆ. ಚಿಲ್ಲರೆ ಹಣದುಬ್ಬರದ ಆಧಾರದ ಮೇಲೆ ಆರ್‌ಬಿಐ ಬಡ್ಡಿದರಗಳನ್ನು ಪರಿಷ್ಕರಣೆ ಮಾಡುತ್ತದೆ. ಚಿಲ್ಲರೆ ಹಣದುಬ್ಬರವನ್ನು ಶೇ 4ರಲ್ಲಿ ಇರುವಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಆರ್‌ಬಿಐಗೆ ಸೂಚನೆ ನೀಡಿದೆ. ಆಗಸ್ಟ್‌ನಬೆಳವಣಿಗೆ ದರವು ಆರ್‌ಬಿಐ ನಿಗದಿ ಮಾಡಿರುವ ಶೇ 4ಕ್ಕಿಂತಲೂ ಕಡಿಮೆಯೇ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.