ನವದೆಹಲಿ: ದೇಶದ ಕೈಗಾರಿಕಾ ಉತ್ಪಾದನೆಯು 2021ರ ಡಿಸೆಂಬರ್‌ನಲ್ಲಿ ಶೇ 0.4ರಷ್ಟಾಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು (ಎನ್‌ಎಸ್‌ಒ) ಮಾಹಿತಿ ನೀಡಿದೆ.
ಕೈಗಾರಿಕಾ ಉತ್ಪಾದನೆ ಸೂಚ್ಯಂಕವು (ಐಐಪಿ) 2020ರ ಡಿಸೆಂಬರ್‌ನಲ್ಲಿ ಶೇ 2.2ರಷ್ಟು ಬೆಳವಣಿಗೆ ಕಂಡಿತ್ತು. ಇದಕ್ಕೆ ಹೋಲಿಸಿದರೆ 2020ರ ಡಿಸೆಂಬರ್‌ನಲ್ಲಿ ಇಳಿಕೆ ಕಂಡಿದೆ.
2021ರ ಡಿಸೆಂಬರ್‌ನಲ್ಲಿ ತಯಾರಿಕಾ ವಲಯದ ಬೆಳವಣಿಗೆಯು ಶೇ (–) 0.1ರಷ್ಟು ಇಳಿಕೆ ಕಂಡಿದೆ. ಗಣಿ ವಲಯದ ಬೆಳವಣಿಗೆ ಶೇ 2.6ರಷ್ಟು ಮತ್ತು ವಿದ್ಯುತ್ ವಲಯ ಶೇ 2.8ರಷ್ಟು ಬೆಳವಣಿಗೆ ಸಾಧಿಸಿವೆ.
2021ರ ಏಪ್ರಿಲ್–ಡಿಸೆಂಬರ್ ಅವಧಿಯಲ್ಲಿ ಐಐಪಿ ಶೇ 15.2ರಷ್ಟು ಬೆಳವಣಿಗೆ ಕಂಡಿದೆ. 2020ರ ಇದೇ ಅವಧಿಯಲ್ಲಿ ಶೇ (–) 13.3ರಷ್ಟು ಇಳಿಕೆ ಕಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.