ನವದೆಹಲಿ: ದೇಶದ ಕೈಗಾರಿಕಾ ಉತ್ಪಾದನೆಯು ಮಾರ್ಚ್‌ನಲ್ಲಿ ಶೇಕಡ 1.1ರಷ್ಟಕ್ಕೆ ಕುಸಿದಿದೆ. ಇದು ಐದು ತಿಂಗಳ ಕನಿಷ್ಠ ಮಟ್ಟ. ಫೆಬ್ರುವರಿಯಲ್ಲಿ ಈ ವಲಯದ ಬೆಳವಣಿಗೆಯು ಶೇ 5.8ರಷ್ಟು ಆಗಿತ್ತು.
ವಿದ್ಯುತ್ ಮತ್ತು ತಯಾರಿಕಾ ವಲಯಗಳ ಬೆಳವಣಿಗೆ ಕಡಿಮೆ ಆಗಿರುವುದರಿಂದ ಕೈಗಾರಿಕಾ ಉತ್ಪಾದನೆ ಈ ಮಟ್ಟಕ್ಕೆ ಇಳಿಕೆ ಕಂಡಿದೆ. ಈ ಹಿಂದೆ 2022ರ ಅಕ್ಟೋಬರ್‌ನಲ್ಲಿ ಶೇ 4.1ರಷ್ಟು ಕುಸಿತ ಕಂಡಿತ್ತು.
ಕೈಗಾರಿಕಾ ಉತ್ಪಾದನೆ ಸೂಚ್ಯಂಕದ (ಐಐಪಿ) ಆಧಾರದ ಮೇಲೆ ಲೆಕ್ಕ ಹಾಕುವ ಕೈಗಾರಿಕಾ ಉತ್ಪಾದನೆಯು 2022ರ ಮಾರ್ಚ್‌ನಲ್ಲಿ ಶೇ 2.2ರಷ್ಟು ಬೆಳವಣಿಗೆಗೆ ಕಂಡಿತ್ತು.
ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು (ಎನ್‌ಎಸ್‌ಒ) ಬಿಡುಗಡೆ ಮಾಡಿರುವ ಅಂಕಿ–ಅಂಶಗಳ ಪ್ರಕಾರ, ತಯಾರಿಕಾ ವಲಯದ ಬೆಳವಣಿಗೆಯು ಕಳೆದ ವರ್ಷದ ಮಾರ್ಚ್‌ನಲ್ಲಿ 1.4ರಷ್ಟು ಇದ್ದಿದ್ದು ಈ ವರ್ಷದ ಮಾರ್ಚ್‌ನಲ್ಲಿ ಶೇ 0.5ಕ್ಕೆ ಇಳಿಕೆ ಆಗಿದೆ. ವಿದ್ಯುತ್ ವಲಯದ ಉತ್ಪಾದನೆ ಶೇ 6.1ರಿಂದ ಶೇ 1.6ಕ್ಕೆ ಕುಸಿದಿದೆ.
ಆದರೆ, ಗಣಿ ವಲಯದ ಉತ್ಪಾದನೆಯು ಶೇ 3.9ರಿಂದ ಶೇ 6.8ಕ್ಕೆ ಏರಿಕೆ ಕಂಡಿದೆ. ಬಂಡವಾಳ ಸರಕುಗಳ ವಲಯದ ಬೆಳವಣಿಗೆಯು ಶೇ 2.4ರಿಂದ ಶೇ 8.1ಕ್ಕೆ ಏರಿಕೆ ಆಗಿದೆ. 2022–23ರಲ್ಲಿ ಐಐಪಿ ಶೇ 5.1ರಷ್ಟು ಬೆಳವಣಿಗೆ ಕಂಡಿದೆ. 2021–22ರಲ್ಲಿ ಶೇ 11.4ರಷ್ಟು ಬೆಳವಣಿಗೆ ಕಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.