ನವದೆಹಲಿ: ಏಪ್ರಿಲ್ ತಿಂಗಳಿನಲ್ಲಿ ದೇಶದ ಕೈಗಾರಿಕಾ ಉತ್ಪಾದನೆ ಶೇ 4.2 ರಷ್ಟು ಏರಿಕೆಯಾಗಿದೆ ಎಂದು ಸೋಮವಾರ ಬಿಡುಗಡೆಯಾದ ಅಧಿಕೃತ ದತ್ತಾಂಶದಲ್ಲಿ ತಿಳಿಸಲಾಗಿದೆ.
ರಾಷ್ಟ್ರೀಯ ಸಂಖ್ಯಾಶಾಸ್ತ್ರ ಕಾರ್ಯಾಲಯ (NSO) ಈ ಮಾಹಿತಿಯನ್ನು ಬಿಡುಗಡೆ ಮಾಡಿದೆ.
ಇದೇ ತಿಂಗಳಿನಲ್ಲಿ ಗಣಿಗಾರಿಕೆ ಉತ್ಪಾದನೆ ಶೇ 5.1ರಷ್ಟು ಏರಿಕೆಯಾದರೆ, ವಿದ್ಯುತ್ ಉತ್ಪಾದನೆ ಶೇ 1.1 ರಷ್ಟು ಖೋತವಾಗಿದೆ.
ಕೈಗಾರಿಕಾ ಉತ್ಪಾದನಾ ಸೂಚ್ಯಂಕದ (IIP) ಮೂಲಕ ಲೆಕ್ಕ ಹಾಕಲಾಗುವ ಕಾರ್ಖಾನೆ ಉತ್ಪಾದನೆ 2022ರ ಏಪ್ರಿಲ್‌ನಲ್ಲಿ ಶೇ 6.7 ರಷ್ಟು ಏರಿಕೆ ಕಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.